#PinkPromise | ಆರ್‌ಸಿಬಿ-ರಾಜಸ್ಥಾನ ಪಂದ್ಯದಲ್ಲಿ 13 ಸಿಕ್ಸರ್‌ಗಳು: 78 ಮನೆಗಳಿಗೆ ಸಿಕ್ಕಿತು ಸೋಲಾರ್ ಬೆಳಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಶನಿವಾರ ಸವಾಯಿ ಮಾನ್‌ಸಿಂಗ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ವೇಳೆ ಎರಡು ತಂಡಗಳಿಂದ ದಾಖಲಾಗುವ ಪ್ರತಿ ಸಿಕ್ಸರ್‌ಗೆ 6 ಮನೆಗಳಿಗೆ ಸೋಲಾರ್ ಪವರ್ ಒದಗಿಸುವುದಾಗಿ ಘೋಷಿಸಿತ್ತು.

ಇದೀಗ ಈ ಪಂದ್ಯದ ಮೂಲಕ ರಾಜಸ್ಥಾನದಲ್ಲಿರುವ 78 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.

ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಪಂದ್ಯ ವೀಕ್ಷಿಸಲು ಬರುವ ಪ್ರತಿ ಅಭಿಮಾನಿಗಳಿಗೆ ಪ್ರತಿ ಟಿಕೆಟ್‌ಗೆ 100 ರುಪಾಯಿಯಂತೆ ಒಂದು ಪಿಂಕ್ ಜೆರ್ಸಿ ವಿತರಿಸಲಾಗಿತ್ತು. ಇದರ ಜತೆಗೆ ಔರತ್ ಹೈ ತೋ ಭಾರತ್ ಹೈ(ಮಹಿಳೆಯಿದ್ದರೇ, ಭಾರತ ಇರುತ್ತೆ) ಎನ್ನುವ ಘೋಷವಾಕ್ಯದೊಂದಿಗೆ ಕಣಕ್ಕಿಳಿದಿತ್ತು. ಇದೀಗ 78 ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವ ಕೆಲಸ ಮಾಡಿದೆ.

Imageರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ 13 ಸಿಕ್ಸರ್‌ಗಳು ದಾಖಲಾದವು. ಹೀಗಾಗಿ ಪ್ರತಿ ಸಿಕ್ಸರ್‌ಗೆ 6 ಮನೆಗೆ ಸೋಲಾರ್ ವಿದ್ಯುತ್ ಒದಗಿಸುವ ಭರವಸೆ ನೀಡಿರುವುದರಿಂದ 78 ಮನೆಗಳಿಗೆ ಸೋಲಾರ್ ಲೈಟ್ ವ್ಯವಸ್ಥೆ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!