ಬಾಲಕನ ಮೇಲೆ ಪಿಟ್​ ಬುಲ್​ ದಾಳಿ: ಮನುಷ್ಯ ಮಾಡಬೇಕಾದ ಕೆಲಸವನ್ನು ಬೀದಿ ನಾಯಿಗಳು ಮಾಡಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಸಾಕು ನಾಯಿಗಳ ದಾಳಿಯು ಹೆಚ್ಚು ಸಾಮಾನ್ಯವಾಗಿದೆ. ಇದೀಗ ಗಾಜಿಯಾಬಾದ್ನಲ್ಲಿ ಬಾಲಕನೊಬ್ಬನ ಮೇಲೆ ಪಿಟ್ ಬುಲ್ ದಾಳಿ ನಡೆಸಿದ್ದು, ಬಾಲಕನನ್ನು ರಕ್ಷಿಸಲು ಬೀದಿನಾಯಿ ಓಡಿ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆಯ ಗೇಟ್ ಬಳಿ ನಾಯಿಯೊಂದು ಹುಡುಗನ ಮೇಲೆ ದಾಳಿ ಮಾಡಿದೆ, ಆ ವೇಳೆ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದ ಯುವಕ ಕಾಪಾಡಿ ಎಂದು ಕೂಗಾಡುತ್ತಿದ್ದಾನೆ, ಜನರು ಭಯದಿಂದ ನಿಂತುಕೊಂಡು ನೋಡುತ್ತಿದ್ದರೇ ಹೊರತು ಯಾರೂ ಸಹಾಯಕ್ಕೆ ಬರಲಿಲ್ಲ.

ನಂತರ ಹುಡುಗ ಹೇಗಾದರೂ ಪಕ್ಕದ ಮನೆಯ ಗೇಟ್ ತೆರೆದು ಒಳಗೆ ಪ್ರವೇಶಿಸಲು ಪ್ರಯತ್ನಿಸಿದನು, ಆದರೆ ನಾಯಿ ಮತ್ತೆ ದಾಳಿ ಮಾಡಿದೆ. ಇದಾದ ಬಳಿಕ ಯುವಕನ ಸಹಾಯಕ್ಕೆ ಬೀದಿ ನಾಯಿಗಳು ಬಂದಿವೆ. ಪಿಟ್ ಬುಲ್ ಅನ್ನು ಕಚ್ಚಿ ಎಳೆದು ಹೊರ ಹಾಕಿವೆ. ಆಗ ಹುಡುಗ ಓಡಿ ಹೋಗಿ ಮನೆಯೊಳಗೆ ಸೇರಿಕೊಂಡಿದ್ದಾನೆ.

ಸದ್ಯ ಬಾಲಕನ ಮನೆಯವರು ಹುಡುಗನನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!