ಬಾಲಕನ ಮೇಲೆ ಅಟ್ಯಾಕ್‌ ಮಾಡಿದ ಪಿಟ್‌ ಬುಲ್:‌ ಪ್ರಾಣಾಪಾಯದಿಂದ ಪಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಶುಕ್ರವಾರ 13 ವರ್ಷದ ಬಾಲಕನ ಮೇಲೆ ಸಾಕುಪ್ರಾಣಿ ಪಿಟ್‌ಬುಲ್ ನಾಯಿಯೊಂದು ಅಮಾನುಷವಾಗಿ ದಾಳಿ ಮಾಡಿದೆ. ದಾಳಿಯ ಸಮಯದಲ್ಲಿ, ಬಾಲಕನ ಕಿವಿಯು ನೈಿಯಿಂದ ಕಚ್ಚಲ್ಪಟ್ಟಿದ್ದು ಬಾಲಕ ನೋವಿನಿಂದ ಚೀರಿದ್ದಾನೆ. ಘಟನೆಯ ವೇಳೆ ಜೊತೆಯಲ್ಲಿದ್ದ ಮಗುವಿನ ತಂದೆ ಕಷ್ಟಪಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಗುರುದಾಸ್‌ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮನೆಯವರ ಪ್ರಕಾರ ತಂದೆ ಮತ್ತು ಹುಡುಗ ಇಬ್ಬರೂ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಾಲೀಕರೊಂದಿಗೆ ಹೊರಗೆ ನಿಂತಿದ್ದ ಪಿಟ್‌ಬುಲ್ ನಾಯಿ ಹುಡುಗನನ್ನು ನೋಡಿ ಬೊಗಳಲು ಪ್ರಾರಂಭಿಸಿತು.

ಶೀಘ್ರದಲ್ಲೇ ಮಾಲೀಕರು ಆಕಸ್ಮಿಕವಾಗಿ ನಾಯಿಯನ್ನು ಬಂಧಿಸಿ ಹಿಡಿದುಕೊಂಡಿದ್ದ ಬಾರು ಕೈಬಿಟ್ಟರು ನಿಯಂತ್ರಣ ತಪ್ಪಿಸಿಕೊಂಡ ಪಿಟ್‌ ಬುಲ್‌ ಹುಡುಗನ ಮೇಲೆ ದಾಳಿಮಾಡಿತು. ನಂತರ ಮಾಲೀಕರು ನಾಯಿಯನ್ನು ನಿಯಂತ್ರಿಸಿ ಮನೆಗೆ ತೆರಳಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳ ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!