Monday, October 2, 2023

Latest Posts

ಮಲಯಾಳಂ ಖ್ಯಾತ ನಟನಿಂದ ಪೊಲೀಸ್ ಅಧಿಕಾರಿಯ ಹತ್ಯೆಗೆ ಪ್ಲಾನ್: ಬಯಲಾಯಿತು ಸ್ಫೋಟಕ ಸತ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ನಟ ದಿಲೀಪ್‌ ಕುರಿತ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳ ಕೈಕತ್ತರಿಸಿ, ಹತ್ಯೆ ಮಾಡುವ ಮಹಾಸಂಚನ್ನು ದಿಲೀಪ್‌ ರೂಪಿಸಿದ್ದ ಎಂಬ ಭಯಾನಕ ರಹಸ್ಯ ಬಯಲಾಗಿದೆ.
ಅಧಿಕಾರಿಯನ್ನು ಮುಗಿಸಲು ಸಂಚು ರೂಪಿಸಿರುವ ದಿಲೀಪ್‌ ಮಾಡಿರುವ ಆಡಿಯೋ ಕ್ಲಿಪ್ ಕೂಡ ರಿಲೀಸ್ ಆಗಿದ್ದು, ಈ ಕುರಿತು ಎಫ್‌ಐಆರ್‌ ದಾಖಲು ಮಾಡಲಾಗಿದೆ.
ಘಟನೆ ಏನು?
2017 ರಲ್ಲಿ ದಿಲೀಪ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಮಲಯಾಳಂ ಸಿನಿಮಾದ ಖ್ಯಾತ ನಟಿ ಶೂಟಿಂಗ್ ಮುಗಿಸಿಕೊಂಡು ಹೋಗುತ್ತಿರಬೇಕಾದರೆ ಆಕೆಯನ್ನು ಅಪಹರಿಸಿ ಚಲಿಸುತ್ತಿದ್ದ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸೆಯಲಾಗಿದ್ದು, ಈ ದೃಶ್ಯಗಳನ್ನು ರೆಕಾರ್ಡ್ ಸಹ ಮಾಡಲಾಗಿದೆ ಎಂಬ ಆರೋಪ ದಿಲೀಪ್ ಮೇಲೆ ಇದೆ.
ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಉಪ ಅಧೀಕ್ಷಕ ಬೈಜು ಪೌಲೋಸ್, ದಿಲೀಪ್ ವಿರುದ್ಧ ಹಲವು ಮಾಹಿತಿ ಕಲೆ ಹಾಕಿದ್ದು, ಬಂಧಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ದಿಲೀಪ್‍ ತನ್ನ ಸೋದರ ಮಾವ ಸೂರಜ್ ಜತೆ ಸೇರಿ ಅಧಿಕಾರಿಯ ಮುಗಿಸುವ ಬಗ್ಗೆ ಫೋನ್ ನಲ್ಲಿ ಚರ್ಚೆ ಮಾಡಿದ್ದಾರೆ. ಈ ಆಡಿಯೋ ಕ್ಲಿಪ್ ವೈರಲ್‌ ಆಗಿದೆ. ಈ ಫೋನ್‌ನಲ್ಲಿರುವ ಧ್ವನಿ ದಿಲೀಪ್‌ ಮತ್ತು ಸೂರಜ್‌ದ್ದೇ ಎಂದು ಬಹಿರಂಗಗೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ತನಿಖಾ ತಂಡವನ್ನು ರಚಿಸಿದೆ. ಪ್ರಸ್ತುತ ದಿಲೀಪ್, ಸೂರಜ್, ದಿಲೀಪ್ ಅವರ ಸಹೋದರ ಅನೂಪ್, ಬಾಲಚಂದ್ರಕುಮಾರ್ ‘ವಿಐಪಿ’ ಎಂದು ಸಂಬೋಧಿಸಿದ ವ್ಯಕ್ತಿ ಮತ್ತು ಇತರ ಇಬ್ಬರು ಸೇರಿದಂತೆ ಆರು ಜನರ ವಿರುದ್ಧ ಹೊಸ ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!