ಭಾರತೀಯ ಪ್ರವಾಸಿಗರನ್ನು ಸೆಳೆಯಲು ಪ್ಲಾನ್: ಶ್ರೀಲಂಕಾದಿಂದ ರಾಮಾಯಣ ಪ್ರವಾಸೋದ್ಯಮ ಶುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಶ್ರೀಲಂಕಾ ರಾಮಾಯಣಕ್ಕೆ (Ramayana) ಸಂಬಂಧಿಸಿದ 50 ತಾಣಗಳನ್ನು ಆಯ್ಕೆ ಮಾಡಲಾಗಿದ್ದು,ಈ ಮೂಲಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಿದ್ಧತೆ ನಡೆಸುತ್ತಿದೆ.

ಮುಖ್ಯವಾಗಿ ಭಾರತೀಯ ಪ್ರವಾಸಿಗರು ಹಾಗು ಬೌದ್ಧ ಪ್ರವಾಸಿಗರನ್ನು ಸೆಳೆಯಲು ಶ್ರೀಲಂಕಾದ ಉದ್ದೇಶವಾಗಿದೆ.

‘ನಾವು ರಾಮಾಯಣಕ್ಕೆ ಸಂಬಂಧಿಸಿದ 50 ದ ಪ್ರವಾಸಿ ತಾಣಗಳಗನ್ನು ಗುರುತಿಸಿ ಭಾರತದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದೇವೆ. ಶ್ರೀಲಂಕಾದ ವಿಶಿಷ್ಟ ಸಂಸ್ಕೃತಿ, ಪ್ರವಾಸಿ ತಾಣಗಳು ಭಾರತೀಯರನ್ನು ಮಾತ್ರವಲ್ಲದೆ ಬೌದ್ಧ ಧರ್ಮದವರನ್ನೂ ಆಕರ್ಷಿಸುತ್ತದೆ. ಭಾರತ ಮಾತ್ರವಲ್ಲದೆ ಇಂಗ್ಲೆಂಡ್, ಫ್ರಾನ್ಸ್, ಕೆನಡಾ ಮತ್ತು ಸೌತ್ ಆಫ್ರಿಕಾ ಪ್ರವಾಸಿಗರನ್ನು ಸೆಳೆಯುವುದು ನಮ್ಮ ಉದ್ದೇಶ’ ಎಂದು ಶ್ರೀಲಂಕಾ ಪ್ರವಾಸೋದ್ಯಮ (Tourism) ಪ್ರಚಾರದ ಸಹಾಯಕ ನಿರ್ದೇಶಕ ಜೀವನ ಫೆರ್ನಾಂಡೋ ತಿಳಿಸಿದ್ದಾರೆ.

2023ರಲ್ಲಿ 13,759 ಭಾರತೀಯ ಪ್ರವಾಸಿಗರು ಶ್ರೀ ಲಂಕಾಕ್ಕೆ ಭೇಟಿ ನೀಡಿದ್ದು, ಇದು ಶ್ರೀ ಲಂಕಾ ಪ್ರವಾಸೋದ್ಯಮದ ಇತಿಹಾಸದಲ್ಲೇ ವರ್ಷವೊಂದರಲ್ಲಿ ಇಷ್ಟೊಂದು ಸಂಖ್ಯೆಯ ಭೇಟಿ ನೀಡಿದ್ದು ಮೊದಲಾಗಿದೆ. ‘ಅದ್ರಲ್ಲಿ ಪ್ರವಾಸಕ್ಕೆಂದು ಬಂದ ಭಾರತೀಯರು ಕನಿಷ್ಠ 1 ರಾಮಾಯಣದ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷವೂ ಭಾರತೀಯ ಪ್ರವಾಸಿಗರನ್ನು ಸೆಳೆಯಲು ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಿದ್ದೆವು. ಹಾಗೆಯೇ ಬೌದ್ಧ ಪ್ರವಾಸಿಗರಿಗಾಗಿ ‘ಕಂಡಿ ಇಸಾಲ ಪರಹೆರ’ (ಶ್ರೀ ಲಂಕಾದ ಬುದ್ಧ ಉತ್ಸವ) ವನ್ನು 7 ವಿವಿಧ ಭಾಷೆಗಳಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದೆವು. ಈ ಬಾರಿ ಈ ಉತ್ಸವವನ್ನು 20 ಭಾಷೆಗಳಲ್ಲಿ ಪ್ರಚಾರ ಮಾಡಬೇಕೆಂದುಕೊಂಡಿದ್ದೇವೆ” ಎಂದು ಫೆರ್ನಾಂಡೋ ಹೇಳಿದ್ದಾರೆ.

2022 ರಲ್ಲಿ ಒಟ್ಟು 7,19,978 ಪ್ರವಾಸಿಗರು ಶ್ರೀ ಲಂಕಾಕ್ಕೆ ಭೇಟಿ ನೀಡಿದ್ದರು. ಅದರಲ್ಲಿ 1,23,004 ಪ್ರವಾಸಿಗರು ಭಾರತೀಯರೇ ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!