ವಾಷಿಂಗ್ಟನ್ ನಲ್ಲಿ ವಿಮಾನ ದುರಂತ | ಎಲ್ಲ 67 ಪ್ರಯಾಣಿಕರು ಸಾವು: ಅಮೆರಿಕದಿಂದ ಅಧಿಕೃತ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೆಲಿಕಾಪ್ಟರ್​​ಗೆ ಪ್ರಯಾಣಿಕ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ ಪೊಟೊಮ್ಯಾಕ್ ನದಿಗೆ ಪತನವಾಗಿದ್ದು, ಅಮೆರಿಕನ್ ಏರ್ಲೈನ್ಸ್ ಫ್ಲೈಟ್ 5342 ವಿಮಾನದಲಿದ್ದ ಎಲ್ಲ 64 ನಾಗರಿಕರು ಹಾಗೂ ಸೇನಾ ಹೆಲಿಕಾಪ್ಟರ್​ನಲ್ಲಿದ್ದ ಮೂವರು ಸಹ ಸಾವನ್ನಪ್ಪಿದ್ದಾರೆ ಎಂದು ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್ಲೈನ್ಸ್ ಫ್ಲೈಟ್ 5342 ವಿಮಾನ ಮತ್ತು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವೆ ಡಿಕ್ಕಿ ಹೊಡೆದಿತ್ತು. ಇನ್ನು ಈ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ 64 ಜನರನ್ನು ಹೊತ್ತೊಯ್ಯುತ್ತಿತ್ತು. ಎರಡೂ ವಿಮಾನಗಳು ಪತನಗೊಂಡ ನದಿಯಿಂದ ಕನಿಷ್ಠ 28 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನು ಸೇನಾ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್​​ನಲ್ಲಿ ಮೂವರು ಸೇನಾಧಿಕಾರಿಗಳಿದ್ದರು ಎನ್ನಲಾಗಿದ್ದು ಅವರು ಸಹ ಸಾವನ್ನಪಿದ್ದಾರೆ ಎಂದು ವರದಿಯಾಗಿದೆ

ಈ ಕುರಿತು ಪ್ರತಿಕ್ರಿಯಿಸಿರುವ ಎಎಫ್‌ಪಿ ವಾಷಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಅವರು,ಈ ಹಂತದಲ್ಲಿ ಯಾರಾದರೂ ಬದುಕುಳಿದಿದ್ದಾರೆ ಎಂದು ನಂಬುವುದಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ವಿಮಾನ ಹಾಗೂ ಜೆಟ್​​ ಡಿಕ್ಕಿಯ ಕುರಿತು ತನಿಖೆ ನಡೆಯುತ್ತಿದ್ದು, ಇನ್ನುಳೀದ ಮೃತರ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಘರ್ಷಣೆಯ ಹಿಂದಿನ ಕಾರಣವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಮತ್ತು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಯ ತನಿಖಾಧಿಕಾರಿಗಳು ಅಪಘಾತದ ಸ್ಥಳದಲ್ಲಿ ಉಪಸ್ಥಿತರಿದ್ದು, ದುರಂತ ಘಟನೆಗೆ ಕಾರಣವಾದ ಸಂದರ್ಭಗಳನ್ನು ಒಟ್ಟುಗೂಡಿಸಲು ಕೆಲಸ ಮಾಡುತ್ತಿದ್ದಾರೆ.

ಕನ್ಸಾಸ್‌ನ ವಿಚಿತಾದಿಂದ ಹೊರಟ ಪ್ರಯಾಣಿಕ ಜೆಟ್ ಮತ್ತು ತರಬೇತಿ ವ್ಯಾಯಾಮದಲ್ಲಿ ತೊಡಗಿದ್ದ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ರಾತ್ರಿ 9 ಗಂಟೆಯ ನಂತರ (IST) ಘರ್ಷಣೆ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಶ್ವೇತಭವನ ಮತ್ತು ಕ್ಯಾಪಿಟಲ್‌ನಿಂದ ಕೇವಲ ಮೂರು ಮೈಲುಗಳಷ್ಟು ದೂರದಲ್ಲಿರುವ ವಿಮಾನ ನಿಲ್ದಾಣದ ರನ್‌ವೇಗೆ ಜೆಟ್ ಸಮೀಪಿಸುವಾಗ ಅಪಘಾತ ಸಂಭವಿಸಿದೆ. ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಕ್ರಿಯಿಸಿ,ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!