July 23, 2026
Thursday, July 23, 2026
spot_img

ಮಾನ್ಸೂನ್‌ ಟ್ರಿಪ್‌ ಪ್ಲಾನ್‌ ಮಾಡ್ತಿದ್ದೀರಾ? ಉತ್ತರ ಕನ್ನಡಕ್ಕೆ ಭೇಟಿ ನೀಡಿ ನಾಲ್ಕಾರು ಫಾಲ್ಸ್‌ ನೋಡಿ ಬನ್ನಿ

ಸ್ನೇಹಿತರು, ನೆಂಟರು, ಪರಿಚಯದವರು, ಪರಿಚಯವೇ ಇಲ್ಲದವರು ಕೂಡ ಮಾನ್ಸೂನ್‌ ಟ್ರಿಪ್‌ ಮಾಡ್ತಿದ್ದಾರೆ. ನಾವು ಕೂಡ ಟ್ರಿಪ್‌ ಹೋಗ್ಬೇಕು, ಫಾಲ್ಸ್‌ನಲ್ಲಿ ಆಟ ಆಡಬೇಕು ಅಂದುಕೊಳ್ತಾ ಇದ್ರೆ ಮಿಸ್‌ ಮಾಡದೇ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ. ರಾಜ್ಯದಲ್ಲಿ ಅತಿ ಹೆಚ್ಚು ಫಾಲ್ಸ್‌ ಇರುವ ಈ ಜಿಲ್ಲೆಯಿಡೀ ಹಸಿರಾಗಿದೆ. ಇಲ್ಲಿ ಹೋದಾಗ ತಪ್ಪದೇ ಈ ನಾಲ್ಕು ಫಾಲ್ಸ್‌ಗಳನ್ನು ವಿಸಿಟ್‌ ಮಾಡಿ..

ಉಂಚಳ್ಳಿ ಫಾಲ್ಸ್‌

ಸಿರಸಿಯಲ್ಲಿರುವ ಉಂಚಳ್ಳಿ ಫಾಲ್ಸ್‌ ಬರೋಬ್ಬರಿ 116 ಮೀಟರ್‌ ಮೇಲಿಂದ ನೆಲಕ್ಕೆ ಧುಮುಕುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲೋದಿಲ್ಲ. ಆದರೆ ಈ ಫಾಲ್ಸ್‌ನಲ್ಲಿ ನೀರಿನಲ್ಲಿ ಆಡೋಕೆ ಅವಕಾಶ ಇಲ್ಲ. ದೂರದಿಂದ ನೀವು ಫಾಲ್ಸ್‌ ನೋಡಬಹುದಷ್ಟೆ.

ವಿಭೂತಿ ಫಾಲ್ಸ್‌
ಯಲ್ಲಾಪುರದಲ್ಲಿ ಇರುವ ವಿಭೂತಿ ಫಾಲ್ಸ್‌ ಗೋಕರ್ಣದಿಂದ ಬಹಳ ಹತ್ತಿರವಾಗಿದೆ. ಇಲ್ಲಿ ಇಡೀ ಹಸಿರು ನಿಮ್ಮನ್ನು ಆವರಿಸುತ್ತದೆ. ಅದರ ಮಧ್ಯದಲ್ಲಿ ಜಲಪಾತದಿಂದ ನೀರು ಸುರಿಯುತ್ತದೆ. ಇಲ್ಲಿ ಆಟ ಕೂಡ ಆಡಬಹುದು. ಫ್ಯಾಮಿಲಿ ಹಾಗೂ ಮಕ್ಕಳನ್ನೂ ಕರೆದುಕೊಂಡು ಹೋಗಬಹುದು.

ಮಾಗೋಡ್‌ ಜಲಪಾತ
ಶಾಲ್ಮಲ ಹಾಗೂ ಬೇಡ್ತಿ ನದಿಯಿಂದ ಈ ಜಲಪಾತ ಉಗಮಿಸಿದೆ. ಬರೋಬ್ಬರಿ 200 ಮೀಟರ್‌ ಮೇಲಿನಿಂದ ಜಲಪಾತ ಧುಮ್ಮಿಕ್ಕುತ್ತದೆ.

ಜೋಗ ಜಲಪಾತ
ಇದು ಉತ್ತರ ಕನ್ನಡದ ಬಾರ್ಡರ್‌ನಲ್ಲಿ ಕಾಣಸಿಗುವ ವಿಶ್ವವಿಖ್ಯಾತ ಜಲಪಾತ. ಇದು ಭಾರತದ ಪವರ್‌ಫುಲ್‌ ವಾಟರ್‌ಫಾಲ್‌. ರಾಜ, ರಾಣಿ, ರೋರರ್‌ ಹಾಗೂ ರಾಕೆಟ್‌ ಎನ್ನುವ ಹೆಸರಿನಲ್ಲಿ ನಾಲ್ಕು ಕಡೆ ನೀರು ಧುಮ್ಮಿಕ್ಕುತ್ತದೆ. ಇದೊಂದು ಜಲಪಾತವನ್ನು ನೋಡಲು ಜನ ದೇಶ ವಿದೇಶಗಳಿಂದಲೂ ಆಗಮಿಸುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !