Tuesday, February 27, 2024

ಸಿಡಿಲು ಬಡಿದು ಆಟಗಾರ ಮೈದಾನದಲ್ಲೇ ಮೃತ್ಯು: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್ಬಾಲ್​ ಆಡುತ್ತಿದ್ದ ವೇಳೆ ಮೈದಾನದಲ್ಲಿ ಸಿಡಿಲು ಬಡಿದ ಘಟನೆ ಇಂಡೋನೇಷ್ಯಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ನಡೆದಿದೆ. ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೈದಾನದಲ್ಲೇ ಫುಟ್ಬಾಲ್​ ಆಡುತ್ತಿದ್ದ ಆಟಗಾರರ ಪೈಕಿ ಓರ್ವ ಆಟಗಾರನಿಗೆ ಸಿಡಿಲು ಬಡಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿ ಮಾಡುತ್ತಿದೆ. ಮಾಹಿತಿಯ ಪ್ರಕಾರ ಈ ಘಟನೆ ಫೆ. ೧೦ ಅಂದ್ರೆ ಶನಿವಾರ ನಡೆದಿದೆ.

ಪಶ್ಚಿಮ ಜಾವಾದ ಬಮಡಂಗ್​ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಪಂದ್ಯ ಏರ್ಪಡಿಸಲಾಗಿತ್ತು. ಪಂದ್ಯ ನಡೆಯುತ್ತಿದ್ದ ವೇಳೆ ಧಿಡೀರ್ ಮಳೆ ಸುರಿದಿದೆ. ಈ ವೇಳೆ ಏಕಾಏಕಿ ಸಿಡಿಲು ಬಡಿದು ಆಟಗಾರನ ಜೆರ್ಸಿ ಸುಟ್ಟು ಕರಕಲಾಗಿದೆ. ಈ ಪರಿಣಾಮ ಆಟಗಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!