ಹೊಸದಿಗಂತ, ಮಂಗಳೂರು:
ಕಾಸರಗೋಡು ಜಿಲ್ಲೆಯ ಕುಬಣೂರಿನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.
ಈ ಪರಿಸರದಲ್ಲಿ ಏಕಾಏಕಿ ಕಾಣಿಸಿಕೊಂಡ ದಟ್ಟ ಹೊಗೆ ಸ್ಥಳೀಯರನ್ನು ಆತಂಕ್ಕೀಡುಮಾಡಿತ್ತು. ಮಾಹಿತಿ ಪಡೆದು ತಕ್ಷಣವೇ ಸ್ತಳಕ್ಕೆ ಧಾವಿಸಿ ಬಂದ ಉಪ್ಪಳ, ಕಾಸರಗೋಡು ಹಾಗೂ ತೃಕ್ಕರಿಪುರದ ಅಗ್ನಿಶಾಮಕ ಸಿಬ್ಬಂದಿಗಳು ಭಾರೀ ಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಈ ನಡುವೆ ಘಟನೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಯವರು ಪೊಲೀಸರಿಗೆ ಆದೇಶ ನೀಡಿದ್ದಾರೆ.