ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ವಂತಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವನ್ಯಜೀವಿಗಳ ಜೊತೆ ಆಟವಾಡಿದ್ದಾರೆ. ಹುಲಿ ಮತ್ತು ಸಿಂಹದ ಮರಿಗಳ ಜೊತೆ ಪ್ರಧಾನಿ ಮೋದಿ ಆಟವಾಡಿದ್ದು ವಿಶೇಷ ಎನಿಸಿತ್ತು.
ವಂತಾರವು 2,000ಕ್ಕೂ ಹೆಚ್ಚು ಜಾತಿಗಳು ಮತ್ತು 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಅಲ್ಲಿ ಪುನರ್ವಸತಿ ಒದಗಿಸಲಾದ ವಿವಿಧ ಜಾತಿಯ ಪ್ರಾಣಿಗಳೊಂದಿಗೆ ಪ್ರಧಾನಿ ಮೋದಿ ಉತ್ತಮ ಕ್ಷಣಗಳನ್ನು ಕಳೆದರು. ಪ್ರಧಾನಿ ಮೋದಿ ಏಷ್ಯನ್ ಸಿಂಹದ ಮರಿಗಳು ಮತ್ತು ಬಿಳಿ ಸಿಂಹದ ಮರಿಗಳು ಸೇರಿದಂತೆ ವಿವಿಧ ಜಾತಿಯ ಚಿರತೆಗಳಿಗೆ ಆಹಾರ ನೀಡುತ್ತಾ ಆ ಪ್ರಾಣಿಗಳು ಆಟವಾಡುವುದನ್ನು ವೀಕ್ಷಿಸಿದರು.
ಅತ್ಯಾಧುನಿಕ ಪಶು ಚಿಕಿತ್ಸಾ ಕೇಂದ್ರದ ಸೌಲಭ್ಯಗಳನ್ನು ವೀಕ್ಷಿಸಿದ ಮೋದಿ ಹುಲಿ, ಸಿಂಹಗಳ ಜೊತೆ ಜಿರಾಫೆ, ಆನೆ, ಗಿಣಿ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ವೀಕ್ಷಣೆ ಮಾಡಿದರು.ಜೊತೆಗೆ ಹುಲಿ ಹಾಗೂ ಸಿಂಹದ ಮರಿಗಳಿಗೆ ಹಾಲು ಕುಡಿಸಿ ಆರೈಕೆ ಮಾಡಿದರು.
ಪ್ರಧಾನಿ ಮೋದಿ ವಂತಾರಾಕ್ಕೆ ಭೇಟಿ ನೀಡಿದ ವಿಡಿಯೋ ಈಗ ಬಿಡುಗಡೆಯಾಗಿದೆ. ಮೋದಿ ಅನಂತ್ ಅಂಬಾನಿ ಕೂಡ ಉಪಸ್ಥಿತರಿದ್ದರು. ಸದ್ಯ ಈ ವಿಡಿಯೋ ಲಕ್ಷಾನುಗಟ್ಟಲೇ ವೀವ್ಸ್ ಪಡೆಯುತ್ತಿದೆ.