ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವರುಣ್ ಆರಾಧ್ಯ, ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು, ಆದರೆ ಬಳಿಕ ಆ ಯುವತಿಯೇ ಅದು ಸುಳ್ಳು ಸುದ್ದಿ ಎಂದಿದ್ದೂ ಆಯ್ತು. ಅದಾದ ಬಳಿಕ ನಿನ್ನೆ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ನಲ್ಲಿ ಶರಣ್ ಆರಾಧ್ಯ, ಕಣ್ಣೀರು ಹಾಕುತ್ತಾ ತನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಬೆಳೆಯುವ ಸಮಯದಲ್ಲಿ ಅಡ್ಡಗಾಲು ಹಾಕುವ ಪ್ರಯತ್ನ ಮಾಡುತ್ತಲೇ ಇದ್ದಾರೆ, ಹಾಗೆ ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.
ವರ್ಷಾಗೆ ಮದುವೆ ಸೆಟ್ ಆಗಿದೆ, ಈ ಕಾರಣದಿಂದ ನಮ್ಮ ಹಳೆಯ ವಿಡಿಯೋಗಳನ್ನು ತೆಗೆಯುವಂತೆ ಕೇಳಿದ್ದಳು. ನನಗೆ ಡಿಲೀಟ್ ಮಾಡಲು ಸಮಯ ಇರಲಿಲ್ಲ. ಅದಕ್ಕೆ ವಕೀಲರ ಮೂಲಕ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಕೇಳಿದ್ದರು. ನಾನು ಡಿಲೀಟ್ ಮಾಡಿದ್ದೇನೆ ಅಷ್ಟೆ. ಬೇರೆ ಏನೂ ಇಲ್ಲ ಎಂದಿದ್ದಾರೆ.
ವಿಡಿಯೋದಲ್ಲಿ ಕಣ್ಣೀರು ಹಾಕಿರುವ ವರುಣ್ ಆರಾಧ್ಯಾ, ‘ಜೀವನದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಪದೇ ಪದೇ ಬಂದು ಅಡ್ಡಗಾಲು ಹಾಕುತ್ತಿದ್ದೀರಿ’ ಎಂದಿದ್ದಾರೆ. ‘ಬೃಂದಾವನ ಸೀರಿಯಲ್ ನಲ್ಲಿ ನಟಿಸುತ್ತಿರುವ ಖ್ಯಾತ ನಟ ವರುಣ್ ಆರಾಧ್ಯ, ಕೊಲೆ ಬೆದರಿಕೆ, ಬ್ಲ್ಯಾಕ್ ಮೇಲ್ ಮಾಡಿದ್ದಾನೆ, ಆತನ ವಿರುದ್ಧ ದೂರು ದಾಖಲಾಗಿದೆ, ಅರೆಸ್ಟ್ ಮಾಡಲಾಗಿದೆ. ಎಫ್‌ಐಆರ್ ಹಾಕಿದ್ದಾರೆ, ಜೈಲಿಗೆ ಹಾಕಿದ್ದಾರೆ ಎಂದೆಲ್ಲ ಪ್ರಸಾರವಾಗುತ್ತಿದೆ. ಈ ಸುಳ್ಳು ಸುದ್ದಿಗಳನ್ನು ಯಾಕೆ ಹಾಕುತ್ತಿದ್ದೀರ ಎಂಬುದು ಅರ್ಥವಾಗುತ್ತಿಲ್ಲ. ನಾನು ಆರಾಮಾಗಿ ಮನೆಯಲ್ಲೇ ಇದ್ದೀನಿ. ಅವರ ಪಾಡಿಗೆ ಅವರು ಇದ್ದಾರೆ. ಸುದ್ದಿ ಹಾಕುವಾಗ ಏನಾಗಿದೆ ಅಂತ ನಮ್ಮನ್ನು ಕೇಳಿಕೊಂಡು ಹಾಕಿ. ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳುತ್ತೀವಿ’ ಎಂದು ಮನವಿ ಮಾಡಿದ್ದಾರೆ.