ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಮತ್ತೆ ಸಂಚು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮೇಲೆ ಮತ್ತೊಮ್ಮೆ ಹತ್ಯೆಗೆ ಯತ್ನ ನಡೆದಿದೆ ಎಂದು ಯೂರೊ ವೀಕ್ಲಿ ವರದಿ ಮಾಡಿದೆ.
ಅದೃಷ್ಟವಶಾತ್‌ ಪುಟಿನ್‌ ಪಾರಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ. ಹತ್ಯೆಗೆ ಯತ್ನಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ರಷ್ಯಾದಲ್ಲಿ ಮಾಧ್ಯಮ ನಿರ್ಬಂಧ ಇರುವುದರಿಂದ ಹತ್ಯೆ ಯತ್ನ ಯಾವಾಗ ನಡೆಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಯೂರೊ ವೀಕ್ಲಿ ಪ್ರಕಾರ ರಷ್ಯಾ ಅಧ್ಯಕ್ಷ ಪುಟಿನ್‌ರ ಭದ್ರತೆ ಈ ಘಟನೆ ನಂತರ ಇಮ್ಮಡಿಯಾಗಿದ್ದು, ಸುರಕ್ಚತೆಯ ಬಗ್ಗೆ ಭೀತಿ ಹುಟ್ಟಿದೆ ಎನ್ನಲಾಗಿದೆ. ಪುಟಿನ್‌ರ ಕಾರಿನ ಎಡ ವೀಲ್‌ ಬಳಿ ದೊಡ್ಡ ಸ್ಫೋಟವಾಗಿದೆ ಎಂದು ಹೇಳಲಾಗಿದೆ.
ಪುಟಿನ್‌ ಅಧ್ಯಕ್ಷೀಯ ನಿವಾಸಕ್ಕೆ ತೆರಳುತ್ತಿದ್ದಾಗ ಕೆಲ ಕಿಲೋಮೀಟರ್‌ ಇದೆ ಎನ್ನುವಾಗ ಆಂಬುಲೆನ್ಸ್‌ ಒಂದು ಪುಟಿನ್‌ ಎಸ್ಕಾರ್ಟ್‌ಗೆ ಅಡ್ಡ ಬಂದಿದೆ. ಪುಟಿನ್‌ ಕಾರಿನ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನ ತಕ್ಷಣ ಕಾರು ನಿಂತಿದ್ದರಿಂದ ನಿಲ್ಲಿಸಲು ಸಾಧ್ಯವಾಗದೇ ಮುಂದೆ ಹೋಗಿದೆ. ಅದಾದ ನಂತರ ಸ್ಫೋಟ ಕೇಳಿಬಂದಿದೆ, ಎಂದು ಯೂರೊ ವೀಕ್ಲಿ ವರದಿಯಲ್ಲಿ ಅಧಿಕಾರಿಯೊಬ್ಬರ ಹೇಳಿಕೆ ದಾಖಲಿಸಿದ್ದಾರೆ.
ಆದರೆ ಈ ಮಾಹಿತಿಯ ಖಚಿತತೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಶಾಂಘಾಯ್‌ ಕಾರ್ಪೊರೇಷನ್‌ ಸದಸ್ಯ ದೇಶಗಳ ಸಮಿತಿ 22ನೇ ಸಭೆಗೆ ಪುಟಿನ್‌ ಹಾಜರಾಗಲಿದ್ದಾರೆ. ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ಈ ಸಭೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!