Sunday, October 2, 2022

Latest Posts

ಚೂರಿಯಿಂದ ಇರಿದು ಮಹಿಳೆಯ ಹತ್ಯೆ: ಆರೋಪಿ ಸೆರೆ

ಹೊಸದಿಗಂತ ವರದಿ,ಸೋಮವಾರಪೇಟೆ:

ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಾದಾಪುರ ಸಮೀಪದ ಜಂಬೂರು ಬಾಣೆಯಲ್ಲಿ ಗುರುವಾರ ನಡೆದಿದೆ.
ಜಂಬೂರು ನಿವಾಸಿ ಹಂಸ ಎಂಬವರ ಪತ್ನಿ ಸಾಹಿರಾ(35) ಕೊಲೆಯಾದ ಮಹಿಳೆ. ಅದೇ ಗ್ರಾಮದ ನಿವಾಸಿ ಪೂವಯ್ಯ(ಬೊಳ್ಳು) ಕೊಲೆ ಆರೋಪಿ.
ಕಳೆದ 5 ವರ್ಷದ ಹಿಂದೆ ಹಂಸ ಪತ್ನಿಯನ್ನು ತ್ಯಜಿಸಿ ಹೋಗಿದ್ದ. ನಂತರ ಪೂವಯ್ಯ ಹಾಗೂ ಸಾಹಿರಾ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.
ಕಳೆದ ಎರಡು ದಿನದಿಂದ ಸಾಹಿರಾ ದೂರವಾಣಿ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಪೂವಯ್ಯ ವಿಚಲಿತನಾಗಿದ್ದನೆನ್ನಲಾಗಿದ್ದು, ಗುರುವಾರ ಬೆಳಗ್ಗೆ 9.30ಕ್ಕೆ ತಾಹಿರಾ ಮನೆಗೆ ತೆರಳಿ ವಿಚಾರಿಸಿದ್ದಾನೆ. ಮನೆಯಲ್ಲಿ ಇನ್ನೊಬ್ಬ ಗಂಡಸು ಇದ್ದ ಹಿನ್ನೆಲೆಯಲ್ಲಿ ರೋಷಗೊಂಡು ಮನೆಗೆ ಬಂದು ಚಾಕು ಹಿಡಿದು ತೆರಳಿದ್ದಾನೆ. ಅಷ್ಟೊತ್ತಿಗಾಗಲೇ ಮನೆಯಲ್ಲಿದ್ದ ವ್ಯಕ್ತಿ ಹೊರ ಹೋಗಿದ್ದಾನೆ. ಈ ಬಗ್ಗೆ ಸಾಹಿರಾಳೊಂದಿಗೆ ಜಗಳ ಮಾಡಿದ ಆರೋಪಿ ಪೂವಯ್ಯ ಕುತ್ತಿಗೆ ಹಾಗೂ ಕಂಕುಳ ಭಾಗಕ್ಕೆ ಚಾಕುವಿನಿಂದ ತಿವಿದು ಪರಾರಿಯಾಗಿರುವುದಾಗಿ ಹೇಳಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಮಕ್ಕಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಧ್ಯಾಹ್ನ ಒಂದು ಗಂಟೆಗೆ ಸಾಹಿರಾ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಅಯ್ಯಪ್ಪ, ಡಿವೈಎಸ್‍ಪಿ ಗಂಗಾಧರಪ್ಪ, ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅರೋಪಿ ಪೂವಯ್ಯ ವಿವಾಹಿತನಾಗಿದ್ದು ಎರಡು ಗಂಡು ಮಕ್ಕಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!