ಪ್ರಧಾನಮಂತ್ರಿ ತುಂಬಾ ಶಕ್ತಿಶಾಲಿ, ಆದರೆ ದೇವರಲ್ಲ: ಕೇಜ್ರಿವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ವಿಧಾನಸಭೆ ಅಧಿವೇಶನವನ್ನು ಇಂದು ಆಮ್ ಆದ್ಮಿ ಪಕ್ಷದ ನಾಯಕ ಮತ್ತುಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದೆಹಲಿ ವಿಧಾನಸಭೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಮಂತ್ರಿ ತುಂಬಾ ಶಕ್ತಿಶಾಲಿಯಾಗಿರಬಹುದು, ಆದರೆ ಅವರು ದೇವರಲ್ಲ ಎಂದು ಟೀಕಿಸಿದ್ದಾರೆ.

ವಿರೋಧ ಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳಿಗೆ ಸದನದಲ್ಲಿ ಮನೀಷ್ ಸಿಸೋಡಿಯಾ ಮತ್ತು ನನ್ನನ್ನು ನೋಡಿ ಬೇಸರವಾಗಿರಬೇಕು. ಪಿಎಂ ಮೋದಿ ತುಂಬಾ ಶಕ್ತಿಶಾಲಿ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದಾರೆ. ಆದರೆ ಮೋದಿ ದೇವರಲ್ಲ. ಆದರೆ ದೇವರು ನಮ್ಮೊಂದಿಗಿದ್ದಾನೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು.
ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ, ಇಂದು ನಾನು ಮುಖ್ಯಮಂತ್ರಿಯೊಂದಿಗೆ ರಸ್ತೆ ತಪಾಸಣೆಗೆ ಹೋಗಿದ್ದೆ. ನಾನು ಜೈಲಿಗೆ ಹೋಗುವ ಮೊದಲು ದೆಹಲಿ ವಿಶ್ವವಿದ್ಯಾಲಯದ ರಸ್ತೆಗಳು ಉತ್ತಮವಾಗಿದ್ದವು. ಅಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲು ಆದೇಶವನ್ನು ನೀಡುವಂತೆ ನಾನು ಕೇಳಿದೆ. 3-4 ದಿನಗಳ ಹಿಂದೆ ಬಿಜೆಪಿ ನಾಯಕರೊಬ್ಬರನ್ನು ಭೇಟಿಯಾಗಿದ್ದೆ. ನನ್ನನ್ನು ಜೈಲಿಗೆ ಕಳುಹಿಸುವುದರಿಂದ ಏನಾದರೂ ಪ್ರಯೋಜನವಿದೆಯೇ? ಎಂದು ಕೇಳಿದ್ದೆ. ಆಗ ಅವರು ನಾವು ಇಡೀ ದೆಹಲಿ ಸರ್ಕಾರವನ್ನು ಹಳಿತಪ್ಪಿಸಿದೆವು ಎಂದು ಒಪ್ಪಿಕೊಂಡಿದ್ದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಯಾರೂ ಕೇಜ್ರಿವಾಲ್ ಅಪ್ರಾಮಾಣಿಕ ಎಂದು ಹೇಳುವುದಿಲ್ಲ. ಕೇಜ್ರಿವಾಲ್ ಅವರ ವಿರುದ್ಧ ನಕಲಿ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ನಾಯಕರು ಎಎಪಿ ನಾಯಕರನ್ನು ಜೈಲಿಗೆ ಹಾಕಿದ್ದಾರೆ ಎಂದು ಜನರು ಹೇಳುತ್ತಾರೆ. ನಾನು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದ್ದೇನೆಯೇ ವಿನಃ ತಪ್ಪಿತಸ್ಥನೆಂಬ ಕಾರಣಕ್ಕಲ್ಲ ಎಂದು ಹೇಳಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!