ಪ್ರಧಾನಿ ಮೋದಿಗೆ ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್ ಪ್ರಶಸ್ತಿ’ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾರ್ಬಡೋಸ್ ಸರಕಾರದಿಂದಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್ ಪ್ರಶಸ್ತಿ’ ನೀಡಿ ಗೌರವಿಸಿದೆ .

ಈ ಕುರಿತು ಖುಷಿ ಹಂಚಿಕೊಂಡ ಪ್ರಧಾನಿ ಮೋದಿ, ಈ ಗೌರವಕ್ಕಾಗಿ ಬಾರ್ಬಡೋಸ್ ಸರ್ಕಾರ ಮತ್ತು ಜನರಿಗೆ ಕೃತಜ್ಞನಾಗಿದ್ದೇನೆ. ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಪ್ರಶಸ್ತಿಯನ್ನು 1.4 ಬಿಲಿಯನ್ ಭಾರತೀಯರಿಗೆ ಮತ್ತು ಭಾರತ ಮತ್ತು ಬಾರ್ಬಡೋಸ್ ನಡುವಿನ ನಿಕಟ ಸಂಬಂಧಕ್ಕೆ ಅರ್ಪಿಸುತ್ತೇನೆ.ಈ ಗೌರವಕ್ಕಾಗಿ ಬಾರ್ಬಡೋಸ್ ಸರ್ಕಾರ ಮತ್ತು ಜನರಿಗೆ ಕೃತಜ್ಞರಾಗಿರುತ್ತೇನೆ. ಎಂದಿದ್ದಾರೆ.

ಇನ್ನು ಪ್ರಧಾನಿ ಮೋದಿ ಪರವಾಗಿ ಈ ಪ್ರಶಸ್ತಿಯನ್ನು ಬಾರ್ಬಡೋಸ್ ಅಧ್ಯಕ್ಷ ಡೇಮ್ ಸಾಂಡ್ರಾ ಮೇಸನ್ ಅವರಿಂದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಸ್ವೀಕರಿಸಿದ್ದಾರೆ.

https://x.com/narendramodi

ಈ ಕುರಿತಿ ತಿಳಿಸಿದ ಅವರು, ಪ್ರಧಾನಿ ಮೋದಿ ಪರವಾಗಿ ಬಾರ್ಬಡೋಸ್ ಅಧ್ಯಕ್ಷ ಡೇಮ್ ಸಾಂಡ್ರಾ ಮೇಸನ್ ಅವರಿಂದ‘ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!