ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಟ್ಟಿದ ಪುಟಾಣಿ ಮಕ್ಕಳು!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪುಟಾಣಿ ಮಕ್ಕಳೊಂದಿಗೆ ರಾಖಿ ಹಬ್ಬವನ್ನು ಆಚರಿಸಿಕೊಂಡರು. ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದರು. ರಾಖಿ ಕಟ್ಟಿದ ಮಕ್ಕಳೆಲ್ಲ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ತೋಟಗಾರರು, ಚಾಲಕರು, ಕಸಗುಡಿಸುವವರು, ಕ್ಲೀನರ್‌ಗಳು ಮತ್ತು ಇತರ ಸಿಬ್ಬಂದಿಯ ಮಕ್ಕಳು.

ಮಕ್ಕಳೆಲ್ಲರೂ ಸಾಲಾಗಿ ಬಂದು ತಮ್ಮ ಪುಟ್ಟ ಕೈಗಳಿಂದ ಪ್ರಧಾನಿಯವರ ಕೈಗೆ ರಾಖಿಗಳನ್ನು ಕಟ್ಟಿದರು. ಬಳಿಕ ಪ್ರಧಾನಿ ಅವರೊಂದಿಗೆ ಕೆಲಕಾಲ ಖುಷಿಯಿಂದ ಮಾತನಾಡಿದರು. ಮಕ್ಕಳು ರಾಖಿ ಕಟ್ಟುತ್ತಿರುವ ಫೋಟೋಗಳನ್ನ ಪ್ರಧಾನಿ ಮೋದಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು “ಈ ಮಕ್ಕಳೊಂದಿಗೆ ರಕ್ಷಾಬಂಧನ ಆಚರಿಸಿಕೊಂಡಿದ್ದು, ನನಗೆ ಬಹಳ ವಿಶೇಷವಾಗಿದೆ” ಎಂದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!