ಪ್ರಚಾರದ ವೇಳೆ ‘ದಿ ಕೇರಳ ಸ್ಟೋರಿ’ ಪ್ರಸ್ತಾಪಿಸಿದ ಪ್ರಧಾನಿ: ಈ ಸಿನಿಮಾ ನೈಜತೆಯ ಪ್ರತಿರೂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಒನ್ ಮ್ಯಾನ್ ಶೋ ಆಗಿ ಓಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಯಾವುದೇ ಅವಕಾಶವನ್ನು ಬಿಟ್ಟುಕೊಡದೆ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಯತ್ನಿಸುತ್ತಿದ್ದಾರೆ. ಇಂದು ಬಳ್ಳಾರಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಇದೀಗ ತೀವ್ರ ಚರ್ಚೆಯಲ್ಲಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಹರಿದಾಡುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು. ಈ ಸಿನಿಮಾ ಇಂದಿನ ಆತಂಕವಾದದ ನೈಜತೆಯ ಪ್ರತಿರೂಪವನ್ನು ಬಿಂಬಿಸುವಂತಿದೆ ಎಂದರು.

ಕಾಂಗ್ರೆಸ್ ಪಕ್ಷವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಮತ್ತು ಮತ ಬ್ಯಾಂಕ್‌ಗಾಗಿ ಭಯೋತ್ಪಾದನೆಯನ್ನು ರಕ್ಷಿಸಿದೆ. ‘ಕೇರಳ ಸ್ಟೋರಿ ಸಿನಿಮಾ ಭಯೋತ್ಪಾದಕರ ಸಂಚು ಆಧರಿಸಿದೆ. ಈ ಸಿನಿಮಾ ಭಯೋತ್ಪಾದನೆಯ ದುಷ್ಟ ಮುಖವನ್ನು ತೋರಿಸುತ್ತದೆ. ಭಯೋತ್ಪಾದನೆ ಹೇಗೆ ಕೆಲಸ ಮಾಡುತ್ತದೆ ಮತ್ತು ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎಂಬ ಸತ್ಯವನ್ನು ಇದು ಬಹಿರಂಗಪಡಿಸುತ್ತದೆ. ಆದರೆ ಭಯೋತ್ಪಾದನೆ ಕುರಿತಾದ ಈ ಸಿನಿಮಾವನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ಉಗ್ರವಾದದ ಪರವಾಗಿ ವರ್ತಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆ ಸುಳ್ಳುಗಳಿಂದ ಕೂಡಿದೆ ಎಂದು ಮೋದಿ ಟೀಕಿಸಿದರು.

ವಿವಾದದ ನಡುವೆಯೇ ಇಂದು ಥಿಯೇಟರ್‌ಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದೆ. ಕೇರಳದಲ್ಲಿ ಈ ಸಿನಿಮಾದ ವಿರೋಧ ಹೆಚ್ಚಿರುವುದರಿಂದ ರಿಲೀಸ್‌ ಮಾಡಲು ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!