ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರ ಜತೆ ಪ್ರಧಾನಿ ಮೋದಿ ‘ಮಾತುಕತೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ. ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಶಿಕ್ಷಕರನ್ನು ಭೇಟಿ ಅವರೊಂದಿಗೆ ಸಾಕಷ್ಟು ಮಾತುಕತೆ ನಡೆಸಿದ್ದಾರೆ.

ಮಾತುಕತೆಯಲ್ಲಿ ಕಳೆದ ಕೆಲ ಹರ್ಷದ ಘಟನೆಗಳ ತುಣುಕುಗಳನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಹೆಮ್ಮೆಯ ಶಿಕ್ಷಕರನ್ನು ಭೇಟಿ ಮಾಡಿದೆ, ಯುವ ಮನಸ್ಸುಗಳಿಗೆ ಉತ್ತಮ ದಾರಿ ತೋಸಿಸುವ ಇವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಅವರ ಸಮರ್ಪಣಾ ಭಾವ, ಬದ್ಧತೆ ಸ್ಫೂರ್ತಿದಾಯಕ ಎಂದಿದ್ದಾರೆ.

ಪ್ರತೀ ಯುವಕನಿಗೂ ತಮ್ಮ ನೆಚ್ಚಿನ ಶಿಕ್ಷಕ ಇದ್ದೇ ಇರುತ್ತಾರೆ, ಅವರಿಂದ ಬದಲಾವಣೆಗಳನ್ನು ಕಂಡಿರುತ್ತಾರೆ, ಶಿಕ್ಷಕರು ತೋರಿದ ಮಾರ್ಗದಲ್ಲಿ ಮಕ್ಕಳು ನಡೆಯುತ್ತಾರೆ ಎಂದಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!