October 18, 2026
Sunday, October 18, 2026
spot_img

ದಾಖಲೆ ಸೃಷ್ಟಿಸಿದ ಪ್ರಧಾನಿ ಮೋದಿ: ವಿಶ್ವದಲ್ಲೇ ಅತಿ ಹೆಚ್ಚು ಇನ್ಸ್ಟಾಗ್ರಾಮ್‌ ಫಾಲೋವರ್ಸ್‌ ಹೊಂದಿರುವ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಪ್ರಸಿದ್ಧ ಜಾಲತಾಣದವಾದ ಇನ್ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ ನೂರು ಮಿಲಿಯನ್‌ ಫಾಲೋಯರ್ಸ್‌ ಹೊಂದಿದ್ದಾರೆ.

2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೇರಿದ್ದ ಪ್ರಧಾನಿ ಮೋದಿ ಅವರಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ. ಈ ರೀತಿ ನೂರು ಮಿಲಿಯನ್‌ ಫಾಲೋವರ್ಸ್‌ ಹೊಂದಿದ ವಿಶ್ವದ ಮೊದಲ ನಾಯಕ ಪ್ರಧಾನಿ ಮೋದಿಯಾಗಿದ್ದಾರೆ.

ಮುಂದಿನ ಐದು ಪ್ರಮುಖ ಜಾಗತಿಕ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಯೂ ಮೋದಿ ಅವರ ವೈಯಕ್ತಿಕ ಅನುಯಾಯಿಗಳಿಗಿಂತ ಕಡಿಮೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ 43.2 ಮಿಲಿಯನ್ ಅನುಯಾಯಿಗಳಿದ್ದು, ಇಂಡೋನೇಷ್ಯಾ ಅಧ್ಯಕ್ಷ ಪ್ರೊಬೊವೊ ಸುಬಿಯಂಟೊ ಅವರಿಗೆ 15 ಮಿಲಿಯನ್ ಅನುಯಾಯಿಗಳಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಅವರಿಗೆ 14.4 ಮಿಲಿಯನ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರಿಗೆ 11.6 ಮಿಲಿಯನ್ ಮತ್ತು ಅರ್ಜೆಂಟಿನಾ ಅಧ್ಯಕ್ಷ ಜೇವಿಯರ್ ಮಿಲೀ ಅವರಿಗೆ 6.4 ಮಿಲಿಯನ್ ಅನುಯಾಯಿಗಳಿದ್ದಾರೆ.

Must Read