ದೇಶದ ಸಮಸ್ತ ಜನತೆಗೆ ʻಭೋಗಿʼ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕರ ಸಂಕ್ರಾಂತಿಯ ಮೊದಲ ದಿನ ಭೋಗು ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ತಿಳಿಸಿದ್ದಾರೆ. ದೇಶದ ಸಮಸ್ತ ಜನರಿಗೆ ಭೋಗಿ ಹಬ್ಬದ ಶುಭಾಶಯಗಳು ಎಂದು ಟ್ವೀಟ್‌ ಮಾಡಿದ್ದಾರೆ. ವಿಶೇಷವಾಗಿ ಆಚರಿಸುವ ತೆಲುಗು ರಾಜ್ಯದ ಜನತೆಗೂ ಶುಭಾಶಯ ತಿಳಿಸಿದ್ದಾರೆ.

ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಭೋಗಿಯ ಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಕರ ಸಂಕ್ರಾಂತಿ, ಮಾಘ ಬಿಹು, ಪೊಂಗಲ್, ಉತ್ತರಾಯಣದ ಸುಗ್ಗಿಯ ಹಬ್ಬಗಳ ಹಾರ್ದಿಕ ಶುಭಾಶಯಗಳು. ಅವರು ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ವಿದೇಶಾಂಗ ಸಚಿವರು ಹೇಳಿದರು.

ನಾಲ್ಕು ದಿನಗಳ ಪೊಂಗಲ್ ಹಬ್ಬದ ಮೊದಲ ದಿನದಂದು ಭೋಗಿಯನ್ನು ಆಚರಿಸಲಾಗುತ್ತದೆ, ಇದು ದೇಶದ ಪ್ರಮುಖ ಸುಗ್ಗಿಯ ಹಬ್ಬಗಳಲ್ಲಿ ಒಂದಾಗಿದೆ.

ಉತ್ತಮ ಮಳೆ, ಸಮೃದ್ಧ ಫಸಲು ಮತ್ತು ಸಮೃದ್ಧಿಗಾಗಿ ಇಂದ್ರನ ಆಶೀರ್ವಾದವನ್ನು ಕೋರಿ ರೈತರು ಈ ದಿನದಂದು ಇಂದ್ರನನ್ನು ಪೂಜಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!