ಪ್ರಧಾನಿ ಮೋದಿ ಬಳಿ ವಿಭಿನ್ನ ಬೇಡಿಕೆಯಿಟ್ರು ಯಶ್, ಅದೇನು ಅಂದ್ರೆ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರೋ ಇಂಡಿಯಾ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದ್ದು, ಔತಣಕೂಟ ಏರ್ಪಡಿಸಲಾಗಿತ್ತು. ಔತಣಕೂಟದಲ್ಲಿ ಯಶ್ ಕೂಡ ಭಾಗಿಯಾಗಿದ್ದು, ಪ್ರಧಾನಿ ಮೋದಿಗೆ ವಿಭಿನ್ನ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎನ್ನಲಾಗಿದೆ.

ನಮ್ಮ ಸಿನಿಮಾಗಳು ಜಗತ್ತಿನ್ನೆಲ್ಲೆಡೆ ಹೆಸರು ಮಾಡಬೇಕು ಎಂದು ನಿರೀಕ್ಷಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಯಶ್ ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ನಮ್ಮಲ್ಲಿಯ್ಯೂ ಒಂದೊಳ್ಳೆ ಫಿಲ್ಮ್‌ಸಿಟಿ ನಿರ್ಮಾಣವಾಗಬೇಕು, ಶೂಟಿಂಗ್ ಬೇಕಾದ ಎಲ್ಲ ವ್ಯವಸ್ಥೆ ಇಲ್ಲೆ ಸಿಗಬೇಕು. ವಿದೇಶಕ್ಕೆ ಹೋಗಿ ಶೂಟಿಂಗ್ ಮಾಡುವ ಬದಲು ಇಲ್ಲೇ ಶೂಟಿಂಗ್ ನಡೆಯಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!