Tuesday, March 28, 2023

Latest Posts

ಬೆಂಕಿ ಕೆನ್ನಾಲಿಗೆಗೆ ಒಂದು ಬಸ್ ಮತ್ತು ಎರಡು ವ್ಯಾನ್‌ಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್‌ನ ಕುಕಟ್ ಪಲ್ಲಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪಾರ್ಕಿಂಗ್ ಸ್ಥಳದಲ್ಲಿ ಮೂರು ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಖಾಸಗಿ ಟ್ರಾವೆಲ್ ಬಸ್ ಹಾಗೂ ಎರಡು ವ್ಯಾನ್ ಗಳು ಸುಟ್ಟು ಕರಕಲಾಗಿವೆ. ಕುಕಟ್‌ಪಲ್ಲಿಯ ಐಡಿಎಲ್‌ ಹೊಂಡದಲ್ಲಿ ಮಧ್ಯರಾತ್ರಿ ಭಾರತಿ ಟ್ರಾವೆಲ್ಸ್‌ಗೆ ಸೇರಿದ ಮೂರು ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಎಚ್ಚೆತ್ತ ಸಿಬ್ಬಂದಿ ಹತ್ತಿರದ ಬಸ್‌ಗಳನ್ನು ಅಲ್ಲಿಂದ ಸ್ಥಳಾಂತರಿಸಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಆಕಸ್ಮಿಕವೇ? ಅಥವಾ ಯಾರಾದರೂ ಬೆಂಕಿ ಹಚ್ಚಿದರೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!