ಕೊರೋನಾ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿ: ಈ ಕುರಿತ ಪುಸ್ತಕ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದ ಭಾರತ ತತ್ತರಿಸಿದೆ. ಆದರೆ ಸ್ವಲ್ಪವೂ ಕುಗ್ಗದೆ ಕೋವಿಡ್ ಪರಿಸ್ಥಿತಿಯನ್ನು ಎದುರಿಸಿದೆ. ಈ ಹೋರಾಟದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವ ಪ್ರಸ್ತುತಪಡಿಸುವ ಪುಸ್ತಕ ‘ಎ ನೇಷನ್ ಟು ಪ್ರೊಟೆಕ್ಟ್-ಲೀಡಿಂಗ್ ಇಂಡಿಯಾ ಥ್ರೂ ಕೋವಿಡ್ ಕ್ರೈಸಿಸ್’ ಇಂದು ಬಿಡುಗಡೆಯಾಗಲಿದೆ.

ಪ್ರಿಯಮ್ ಗಾಂಧಿ-ಮೋದಿ ಅವರ ಮೂರನೇ ಪುಸ್ತಕ ಇದಾಗಿದೆ.ಇಂದು ಮಧ್ಯಾಹ್ನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಿಂದ ಬರುತ್ತಿರುವ ನಕಾರಾತ್ಮಕ ಪ್ರತಿಕ್ರಿಯೆಗಳ ಹೊರತಾಗಿಯೂ ಪ್ರಧಾನಿ ಮೋದಿ ಸ್ಫೂರ್ತಿ, ಉತ್ಸಾಹ ಹೊಂದಿದಾರೆ. ಎಲ್ಲರಿಗೂ ಪ್ರೇರೇಪಣೆ ನೀಡಿದ್ದಾರೆ. ಈ ಬಗ್ಗೆ ಪುಸ್ತಕದಲ್ಲಿ ಬರೆಯಲಾಗಿದೆ ಎಂದು ಪ್ರಿಯಮ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!