ಅಂದು ಆ ಆಟೋ ಡ್ರೈವರ್ ಬರೋದಕ್ಕೆ ಒಪ್ಪದೇ ಇದ್ದಿದ್ದರೆ…

ಅಂದು ಆಟೋ ಡ್ರೈವರ್‌ಗೆ ಸಿಕ್ಕಾಪಟ್ಟೆ ಸುಸ್ತಾಗಿತ್ತು. ಸಮಯ ರಾತ್ರಿ ಹತ್ತಾಗಿತ್ತು. ಮನೆಗೆ ಹೊರಡಬೇಕು ಆದರೆ ಕೈ ಸೋಲುತ್ತಾ ಇದೆ ಎನಿಸಿ, ಒಂದೈದು ನಿಮಿಷ ಬ್ರೇಕ್ ತೆಗೆದುಕೊಂಡು ಮನೆಗೆ ಹೋಗೋಣ ಅಂತ ನಿರ್ಧರಿಸಿದ. ಮೊಬೈಲ್‌ನಲ್ಲಿ ಇನ್ಸ್‌ಟಾಗ್ರಾಮ್ ನೋಡುತ್ತಾ ಕುಳಿತ. ಹೀಗಿರುವಾಗ ಒಬ್ಬ ವ್ಯಕ್ತಿ ಓಡೋಡಿ ಬಂದ, ಸಾರ್ ಒಬ್ರನ್ನ ಹಾಸ್ಪಿಟಲ್ ಕರ‍್ಕೊಂಡು ಹೋಗ್ಬೇಕು, ಪಾಪಾ ಆಯಮ್ಮ ಗರ್ಭಿಣಿ, ಹೆರಿಗೆ ನೋವು ಅನಿಸತ್ತೆ ಬನ್ನಿ ಸರ್ ಎಂದ.

ಆಟೋ ಡ್ರೈವರ್ ಪೊಲೈಟ್ ಆಗಿಯೇ ಹೇಳಿದ, ನನ್ನ ಡ್ಯೂಟಿ ಟೈಮ್ ಆಗೋಗಿದೆ, ಅಲ್ಲದೇ ಮನೆಗೆ ಹೋಗಬೇಕು, ನನಗೆ ಗಾಡಿ ಹೊಡೆಯೋ ಶಕ್ತಿ ಇಲ್ಲ, ಇನ್ನ ಊಟ ಕೂಡ ಆಗಿಲ್ಲ. ಬೇರೆ ಆಟೋ ನೋಡಿ ಎಂದ. ಗಾಬರಿಯಾಗಿದ್ದ ವ್ಯಕ್ತಿ, ಸರ್ ಯಾವ ಆಟೋನೂ ನಿಲ್ಲಿಸ್ತಿಲ್ಲ, ಅರ್ಥ ಮಾಡ್ಕೊಳ್ಳಿ ಸರ್ ದಯವಿಟ್ಟು ಬನ್ನಿ ಎಂದು ಕೇಳಿದ. ಆಟೋ ಡ್ರೈವರ್ ಕೆಟ್ಟವನಲ್ಲ, ಆತನ ಆರೋಗ್ಯ ಸರಿ ಇರಲಿಲ್ಲ ಅಷ್ಟೆ.

ಇಷ್ಟು ಗೋಗರಿಯುತ್ತಿರೋದು ನೋಡಲಾರದೆ ಹತ್ತಿರದ ಆಸ್ಪತ್ರೆಗೆ ಬಿಟ್ಟುಬಿಡೋಣ ಎಂದು ಹೊರಟ. ನಿಮ್ಮ ಹೆಂಡತಿ ನಾ ಸರ್, ಹೆರಿಗೆ ಡೇಟ್ ಹತ್ರ ಇದೆ ಅಂತಾದ್ರೆ ಮನೆಲೆ ಇರಬೇಕು, ಇಲ್ಲಾ ಗೊತ್ತಿರೋ ಗಾಡಿ ಅರೇಂಜ್ ಮಾಡಬೇಕು ತಾನೆ ಎಂದ. ಅದಕ್ಕೆ ಆತ ಇಲ್ಲ, ಈಗ ಅಲ್ಲಿರೋ ಹೆಂಗಸು ಯಾರು ಅಂತ ನನಗೆ ಗೊತ್ತಿಲ್ಲ. ಅವರು ರಸ್ತೆಲಿ ನಡ್ಕೊಂಡು ಬರ‍್ತಿದ್ರು ನಾನು ನೋಡಿ ಸಹಾಯ ಮಾಡ್ತಿದ್ದೇನಷ್ಟೇ ಎಂದ.

ಹತ್ತಿರದ ಬಸ್‌ಸ್ಟಾಪ್‌ನಲ್ಲಿ ಆಕೆ ಕೂತಿದ್ದಳು. ನೋವಿನಿಂದ ಒದ್ದಾಡುತ್ತಿದ್ದಳು. ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾಗಿದ್ದು, ಆಕೆ ಆಟೋ ಡ್ರೈವರ್ ಹೆಂಡತಿ!!

ಡ್ರೈವರ್ ಬರಲು ಒಪ್ಪದಿದ್ದರೆ ಅಥವಾ ವ್ಯಕ್ತಿ ಸಹಾಯ ಮಾಡಲು ಮುಂದೆ ಬಾರದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಅಸಹಾಯಕರಿಗೆ ಸಹಾಯ ಮಾಡಲು ಹಿಂದೆ ಮುಂದೆ ಯೋಚಿಸಬೇಡಿ. ಈ ಪುಣ್ಯಗಳು ನಿಮ್ಮನ್ನು ಸದಾ ಕಾಪಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!