ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎರಡು ರಾಷ್ಟ್ರಗಳ ಪ್ರವಾಸವನ್ನು ಮುಗಿಸಿದ ಬಳಿಕ ತಡರಾತ್ರಿ ಭಾರತಕ್ಕೆ ಬಂದಿಳಿದರು.
ಶನಿವಾರ ರಾತ್ರಿ ದೆಹಲಿಗೆ ಮರಳಿದ ಮೋದಿ ಅವರನ್ನು ಹಲವು ಅಧಿಕಾರಿಗಳು ಸ್ವಾಗತಿಸಿದರು. ಯುಎಇಯ ಅಬುಧಾಬಿ ಭೇಟಿಯನ್ನು ಮುಗಿಸಿ ಮೋದಿ ನಿರ್ಗಮಿಸುವ ಸಮಯದಲ್ಲಿ ಎಚ್‌ಎಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಯುಎಇ ಸರ್ಕಾರಿ ಅಧಿಕಾರಿಗಳು ಮೋದಿಯವರನ್ನು ಬೀಳ್ಕೊಟ್ಟರು.
ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿ ಮೋದಿ ಟ್ವೀಟ್ ಮಾಡಿದ್ದಾರೆ. ಯುಎಇ ಜೊತೆಗಿನ ತಮ್ಮ ಆರ್ಥಿಕ ಸಂಬಂಧಗಳು ಎರಡೂ ದೇಶಗಳ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಮೋದಿ ಹೇಳಿದರು. 80 ರಷ್ಟು ಸರಕುಗಳ ಮೇಲಿನ ಸುಂಕವನ್ನು ತೆಗೆದುಹಾಕುವ ಮತ್ತು ಕಡಿಮೆ ಮಾಡುವ ಮೂಲಕ, ಎರಡು ದೇಶಗಳ ನಡುವಿನ ವ್ಯಾಪಾರದ ಅಡೆತಡೆಗಳನ್ನು ತೆಗೆದುಹಾಕಲಾಗಿದೆ.