ಸಂಭಾಲ್ ಜಿಲ್ಲೆಯಲ್ಲಿ ತಲೆಯೆತ್ತಲಿದೆ ಕಲ್ಕಿಯ ಭವ್ಯಮಂದಿರ: ಮೋದಿ ಹಸ್ತದಲ್ಲಿ ಶಂಕುಸ್ಥಾಪನೆ ಪೂರ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕಲ್ಕಿಧಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ, ಇಂದು ಸಂತರ ಭಕ್ತಿ ಮತ್ತು ಸಾರ್ವಜನಿಕರ ಉತ್ಸಾಹದಿಂದ ಮತ್ತೊಂದು ಪುಣ್ಯ ಕ್ಷೇತ್ರಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಆಚಾರ್ಯರು, ಸಂತರ ಸಮ್ಮುಖ ಈ ದೇಗುಲದ ಶಂಕುಸ್ಥಾಪನೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ದೇಗುಲ ಭಾರತೀಯ ನಂಬಿಕೆಯ ಮತ್ತೊಂದು ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಲ್ಕಿಧಾಮದ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಪಸ್ಥಿತಿಯಲ್ಲಿ ಮೋದಿ, ದೇವಾಲಯದ ಮಾದರಿಯನ್ನು ಅನಾವರಣಗೊಳಿಸಿದರು.
ಶ್ರೀ ಕಲ್ಕಿ ಧಾಮದ ನಿರ್ಮಾಣವನ್ನು ಆಚಾರ್ಯ ಪ್ರಮೋದ್ ಕೃಷ್ಣಂ ಅಧ್ಯಕ್ಷತೆಯ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ಕೈಗೆತ್ತಿಕೊಳ್ಳಲಿದೆ.

ಇದರ ಜೊತೆಗೆ ಉತ್ತರಪ್ರದೇಶದಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!