ಬುದ್ಧನ ಜನ್ಮಸ್ಥಳಕ್ಕೆ ಇಂದು ಪ್ರಧಾನಿ ಭೇಟಿ, ದೇವ್ಬಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಪ್ರಸ್ತುತ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ನೇಪಾಳದೊಂದಿಗಿನ ಸಂಬಂಧವು ಅಸಮಾನ್ಯವಾದದ್ದು ಮತ್ತು ಆಧ್ಯಾತ್ಮಿಕ ಬಂಧವು ಕಾಲಾನಂತರದಲ್ಲಿ ಗೆದ್ದಿದೆ ಎಂದಿದ್ದಾರೆ.  ಇಂದು ಬುದ್ಧಪೂರ್ಣಿಮೆಯ ಸಂದರ್ಭದಲ್ಲಿ ಮೋದಿ ನೇಪಾಳದ ಲುಂಬಿನಿ ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಮುಖ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವ್ಬಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಕಳೆದ ತಿಂಗಳು ನೇಪಾಳ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತುಕತೆ ಫಲಪ್ರದವಾಗಿತ್ತು ಎಂದು ಪ್ರಧಾನಿ ಸ್ಮರಿಸಿದರು. ಉಭಯ ದೇಶಗಳ ನಡುವಿನ ಜಲವಿದ್ಯುತ್ ಯೋಜನೆಗಳು, ಅಭಿವೃದ್ಧಿ, ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿಷಯಗಳಲ್ಲಿ ಪರಸ್ಪರ ಸಹಕಾರ ನೀಡಲು ನಿರ್ಧರಿಸಲಾಗಿದೆ ಎಂದರು. ಶತಮಾನಗಳಿಂದ ಉಭಯ ದೇಶಗಳು ಮತ್ತು ಜನರ ನಡುವಿನ ಸಂಬಂಧಗಳು ಗಟ್ಟಿಯಾಗಿವೆ ಅವುಗಳನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ನೇಪಾಳ ಭೇಟಿ ಸಂದರ್ಭದಲ್ಲಿ ಮಾಯಾದೇವಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಪವಿತ್ರ ಬುದ್ಧನ ಜನ್ಮಸ್ಥಳದಲ್ಲಿ ಎಲ್ಲಾ ಭಾರತೀಯರ ಪರವಾಗಿ ಗೌರವ ಸಮರ್ಪಿಸಿದ್ದಾರೆ. 2019ರ ನಂತರ ಪ್ರಧಾನಿ ಮೋದಿ ನೇಪಾಳದ ಮೊದಲ ಭೇಟಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!