ಹಿಂದು ದೇವಾಲಯಗಳ ಮೇಲಿನ ದಾಳಿ ಪ್ರಸ್ತಾಪಿಸಿದ ಮೋದಿ: ಪಿಎಂ ಅಲ್ಬನೀಸ್ ಉತ್ತರ ಹೀಗಿತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೇಶದಲ್ಲಿ ದೇವಾಲಯಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿದರು. ಮೋದಿಯವರ ಪ್ರಸ್ತಾವನೆಗೆ “ಭವಿಷ್ಯದಲ್ಲಿ ಅಂತಹ ಅಂಶಗಳ ವಿರುದ್ಧ ಕಠಿಣ ಕ್ರಮಗಳನ್ನು” ತೆಗೆದುಕೊಳ್ಳುವುದಾಗಿ ಪ್ರಧಾನಿ ಆಂಟನಿ ಅಲ್ಬನೀಸ್ ಭರವಸೆ ನೀಡಿದ್ದಾರೆ.

ಅಲ್ಬನೀಸ್ ಅವರೊಂದಿಗೆ ಜಂಟಿ ಭಾಷಣದಲ್ಲಿ ಪ್ರಧಾನಿ ಮೋದಿ, “ಪಿಎಂ ಆಂಥೋನಿ ಅಲ್ಬನೀಸ್ ಮತ್ತು ನಾನು ಈ ಹಿಂದೆ ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿ ಮತ್ತು ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ವಿಷಯದ ಬಗ್ಗೆ ಚರ್ಚಿಸಿದ್ದೇವೆ. ನಾವು ಇಂದು ಕೂಡ ಈ ವಿಷಯವನ್ನು ಚರ್ಚಿಸಿದ್ದೇವೆ. ಭಾರತ-ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಮತ್ತು ಆತ್ಮೀಯ ಸಂಬಂಧವನ್ನು ಹಾನಿ ಮಾಡುವ ಯಾವುದೇ ಅಂಶಗಳು ಭವಿಷ್ಯದಲ್ಲಿಯೂ ಅಂತವುಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿ ಅಲ್ಬನೀಸ್ ಇಂದು ಮತ್ತೊಮ್ಮೆ ನನಗೆ ಭರವಸೆ ನೀಡಿದರು” ಎಂದರು.

ಇದಕ್ಕೂ ಮೊದಲು, ಅಲ್ಬನೀಸ್ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಚರ್ಚೆ ನಡೆದಿತ್ತು. “ನಾವು ನಮ್ಮ ಪೋಲಿಸ್ ಮತ್ತು ನಮ್ಮ ಭದ್ರತಾ ಏಜೆನ್ಸಿಗಳ ಮೂಲಕ ಪ್ರತಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ, ಇದಕ್ಕೆ ಕಾರಣವಾದ ಯಾರಾದರೂ ಸರಿ ಕಾನೂನಿನ ಕ್ರಮವನ್ನು ಎದುರಿಸುತ್ತಾರೆ” ಎಂದು ಖಚಿತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!