1893ರಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಸ್ಮರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

1893ರಲ್ಲಿ ಇದೇ ದಿನ ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಸಿಕೊಂಡರು. 1893 ರ ಸೆಪ್ಟೆಂಬರ್ 11 ರಂದು ಒಂದು ಶತಮಾನದ ಹಿಂದೆ, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ಭಾರತದ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು.

ಈ ಬಗ್ಗೆ ಟ್ವಿಟ್‌ ಮಾಡಿರುವ ಪ್ರಧಾನಿ ಮೋದಿ, ಸೆಪ್ಟೆಂಬರ್ 11 ಕ್ಕೂ ಸ್ವಾಮಿ ವಿವೇಕಾನಂದರಿಗೂ ವಿಶೇಷವಾದ ನಂಟಿದೆ. ಇದೇ ದಿನ ಚಿಕಾಗೋದಲ್ಲಿ ಅವರು ತಮ್ಮ ಅತ್ಯುತ್ತಮ ಭಾಷಣದ ಮೂಲಕ ಭಾರತದ ಸಂಸ್ಕೃತಿ ಮತ್ತು ನೈತಿಕತೆಯ ಒಂದು ನೋಟವನ್ನು ಜಗತ್ತಿಗೆ ನೀಡಿತು.

ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯ ಜಗತ್ತಿಗೆ ವೇದಾಂತದ ಪರಿಕಲ್ಪನೆಗಳು ಮತ್ತು ಆದರ್ಶಗಳನ್ನು ಪರಿಚಯಿಸಿದರು ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜಿಯನ್ಸ್ ಆಡಿದ ಮಾತುಗಳೇ ಅವರನ್ನು ಪಶ್ಚಿಮಾತ್ಯ ಜನರಿಗೆ ಪರಿಚಯಿಸಿದ್ದು. ವಿವೇಕಾನಂದರು 19 ನೇ ಶತಮಾನ ಕಂಡ ಭಾರತೀಯ ಧಾರ್ಮಿಕ ನೇತೃ ರಾಮಕೃಷ್ಣ ಪರಮಹಂಸ ಅವರ ಮುಖ್ಯ ಶಿಷ್ಯ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಸಂಸ್ಥಾಪಕರಾಗಿದ್ದರು.

ಸ್ವಾಮಿ ವಿವೇಕಾನಂದರು ಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನದಲ್ಲಿ ಪ್ರಮುಖ ಶಕ್ತಿ ಎಂದು ಪರಿಗಣಿಸಲ್ಪಟ್ಟರು ಮತ್ತು 19 ನೇ ಶತಮಾನದ ಅಂತ್ಯದಲ್ಲಿ ಅದನ್ನು ವಿಶ್ವ ಧರ್ಮದ ಸ್ಥಾನಮಾನಕ್ಕೆ ತಂದರು ಎಂಬುದನ್ನು ಪ್ರಧಾನಿ ಮೋದಿ ಸ್ಮರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!