ಸೆಪ್ಟೆಂಬರ್‌ ನಲ್ಲಿ ಭಾರತ – ಜಪಾನ್‌ 2+2 ಮಾತುಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ನಿಕಟ ಮಿತ್ರನಾಗಿರುವ ಜಪಾನ್‌ ದೇಶವು ಭಾರತದ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳೊಂದಿಗೆ ಮತ್ತು ತನ್ನ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ನಡುವೆ 2+2 ಮಾತುಕತೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಟೋಕಿಯೊದಲ್ಲಿ ರಾಜತಾಂತ್ರಿಕ ಮಾತುಕತೆ ನಡೆಸಲು ಜಪಾನ್ ಸಿದ್ಧತೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

ಮೂಲಗಳ ಪ್ರಕಾರ ಈ ಹಿಂದೆ ಜಪಾನ್ ಮತ್ತು ಭಾರತದ ನಡುವೆ 2+2 ಮಾತುಕತೆಗಳು 2019ರಲ್ಲಿ ನಡೆಸಿದವು ಸಮನ್ವಯ ಮಿಲಿಟರಿ ಅಭ್ಯಾಸಗಳನ್ನು ನಡೆಸಲು ಉಭಯದೇಶಗಳು ಜಂಟಿ ಹೇಳಿಕೆಯನ್ನು ಅಂಗೀಕರಿಸಿದವು.

ಪ್ರಸ್ತುತ ನಡೆಯಲಿರೋ ಮಾತುಕತೆಗಳು ಯಾವ ವಿಷಯದ ಕುರಿತಾಗಿ ಎಂಬುದು ಇನ್ನೂ ಬಹಿರಂಗವಾಗಿಲ್ಲವಾದರೂ ಇಂಡೋ ಫೆಸಿಫಿಕ್‌ ಭಾಗಗಳಲ್ಲಿ ಉಭಯ ದೇಶಗಳ ಪಾಲುದಾರಿಕೆ ಇರುವುದರಿಂದ ಈ ಮಾತುಕತೆಗಳು ಪ್ರಮುಖವಾಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!