ಕಲಬುರಗಿಗೆ ಪ್ರಧಾನಿ ಮೋದಿ : ಕಾರ್ಯಕ್ರಮಕ್ಕೆ ಬಂದವರಿಗೆ ಪಲಾವ್, ಮೈಸೂರ್ ಪಾಕ್!

ಹೊಸದಿಗಂತ ವರದಿ ಕಲಬುರಗಿ: 

ಜಿಲ್ಲೆಯ ಮಳಖೇಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯಲಿರುವ ತಾಂಡಾದ ನಿವಾಸಿಗಳಿಗೆ ಕಂದಾಯ ಇಲಾಖೆ ವತಿಯಿಂದ ಹಕ್ಕು ಪತ್ರ ವಿತರಣಾ ಕಾಯ೯ಕ್ರಮದಲ್ಲಿ ಬರುವಂತಹ ಲಂಬಾಣಿ ಜನರಿಗೆ ಹಾಗೂ ಸಾವ೯ಜನಿಕರಿಗೆ ಊಟದ ದೃಷ್ಟಿಯಿಂದ ಪಲಾವ್, ಸಾಂಬಾರ್ ಹಾಗೂ ಮೈಸೂರು ಪಾಕ್,ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಿಂದ ಆಗಮಿಸುವ ಸುಮಾರು ಐದು ಲಕ್ಷ ಜನರಿಗೆ ಊಟದ ಕೊರತೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ಕ್ಯಾಂಟ್ರಿಂಗ್ ತಂಡದಿಂದ ಊಟದ ಸಿದ್ದತೆಗಳು ನಡೆದಿದ್ದು,ಒಟ್ಟು 450 ಜನ ಅಡುಗೆ ತಯಾರಕರಿಂದ ಅಡುಗೆ ತಯಾರಿ ನಡೆದಿದೆ.ಊಟಕ್ಕಂತೆ 250 ಕೌಂಟರ್, ಗಳನ್ನು ಮಾಡಿಕೊಂಡಿದ್ದು,600 ಜನ ಅಡುಗೆ ಬಡಿಸುವ ಕಾಯ೯ ನಡೆದಿದೆ. 300 ಕ್ಟಿಂಟಲ್ ಅಕ್ಕಿ,3 ಲಕ್ಷ ಮೈಸೂರು ಪಾಕ್ ಮಾಡಿಕೊಳ್ಳಲಾಗಿದೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಿದ ಪ್ರಸಂಗ ನಡೆದಿದೆ.

ಏಪೋ೯ಟ್೯,ಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಪೋಲಿಸ್ ಸಿಬ್ಬಂದಿ ಜೊತೆಗೆ ಗಲಾಟೆ ನಡೆದಿದೆ. ಹಿರಿಯ ಅಧಿಕಾರಿಗಳ ಸೂಚನೆ ಇಲ್ಲದೆ,ಒಳಗಡೆ ಬಿಡಲು ಆಗುವುದಿಲ್ಲ ಎಂದು ಪೋಲಿಸ್ ಸಿಬಂದಿ ಹೇಳಿದ್ದು,ತಡವೇ ಪೋಲಿಸರ ಜೊತೆಗೆ ವಾಗ್ವಾದ ನಡೆದ ಘಟನೆ ನಡೆದಿದೆ.

ಈಘಟನೆನಯಿಂದ ಕಲಬುರಗಿ ವಿಮಾನ ನಿಲ್ದಾಣದ ಮೆನ್ ಗೆಟ್ ಬಳಿ ಕೆಲ ಕಾಲ ಗೊಂದಲದ ವಾತಾವರಣ ನಿಮಾ೯ಣವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!