ಟ್ವಿಟರ್ ಪ್ರಧಾನ ಕಚೇರಿಯಲ್ಲಿ ವಸ್ತುಗಳ ಹರಾಜು, ಹಕ್ಕಿ ಪ್ರತಿಮೆ ಬೆಲೆ ಸಿಕ್ಕಾಪಟ್ಟೆ ಕಾಸ್ಟ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಟ್ವಿಟರ್ ಪ್ರಧಾನ ಕಚೇರಿಯಲ್ಲಿ ವಸ್ತುಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ.

ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋದ ಪ್ರಧಾನ ಕಚೇರಿಯಲ್ಲಿ ಇರುವ ಪೀಠೋಪಕರಣ ಸೇರಿ ಎಲ್ಲ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದಾರೆ. ಟ್ವಿಟರ್ ಹಕ್ಕಿಯ ಪ್ರತಿಮೆಯನ್ನೂ ಹರಾಜಿಗೆ ಇಟ್ಟಿದ್ದು, ಅದರ ಬೆಲೆ ಒಂದು ಲಕ್ಷ ಡಾಲರ್ ಎಂದು ನಿಗದಿಪಡಿಸಲಾಗಿದೆ.

ಒಟ್ಟಾರೆ 621 ಉಪಕರಣಗಳನ್ನು ಹರಾಜು ಹಾಕಲಾಗುತ್ತಿದೆ. ಕಾಫಿ ಮಶೀನ್, ಟೇಬಲ್, ಟಿವಿ, ಸೈಕಲ್, ಚಾರ್ಜಿಂಗ್ ಸ್ಟೇಷನ್, ಅವನ್, ಸ್ಟೋವ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಕಂಪನಿಯ ವೆಚ್ಚಗಳನ್ನು ಕಡಿತಗೊಳಿಸಲು ನಿರ್ಧರಿಸಿರುವ ಎಲಾನ್ ಮಸ್ಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!