Sunday, December 4, 2022

Latest Posts

ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಪ್ರಧಾನಿ ಮೋದಿ ಸಾಕ್ಷಿ: ನವ ಜೋಡಿಗಳಿಗೆ ಶುಭಹಾರೈಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್‌ನ ಭವ್ನಗರದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ತಂದೆ ಕಳೆದುಕೊಂಡ 551 ಯುವತಿಯರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು, ಈ ಕ್ಷಣಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾಗಿದ್ದಾರೆ.

ಜವಾಹರ್ ಮೈದಾನದಲ್ಲಿ ಈ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಮಕ್ರಮ ಆಯೋಜಿಸಲಾಗಿತ್ತು. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವ ಜೋಡಿಗಳಿಗೆ ಶುಭ ಹಾರೈಸಿದರು.

‘ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಹೊಸ ಬದುಕಿಗೆ ಕಾಲಿಟ್ಟ ನವ ಜೋಡಿಗಳು ತಮ್ಮ ಜೀವನದಲ್ಲಿ ಅತ್ಯಂತ ಯಶಸ್ವಿ’ಯಾಗಲೆಂದು ಮೋದಿ ಹಾರೈಸಿದರು. ಇಲ್ಲಿ ಮದುವೆಯಾಗಿರುವ ನವ ಜೋಡಿಗಳು, ಮನೆಯವರ ಒತ್ತಾಯಕ್ಕೆ, ಸಂಬಂಧಿಕರ ಒತ್ತಾಯಕ್ಕೆ ಮತ್ತೆ ಅದ್ದೂರಿ ಮದುವೆಯಾಗಬೇಡಿ. ಸುಖಾಸುಮ್ಮನೆ ಹಣ ಪೋಲು ಮಾಡಬೇಡಿ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದರಿ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!