ಹಾವೇರಿಗೆ ಪ್ರಧಾನಿ ಮೋದಿ ಆಗಮನ: ಕಾರ್ಯಕ್ರಮಕ್ಕೆ ಪೆಂಡಾಲ, ವೇದಿಕೆ ಸಿದ್ಧತೆಗೆ ಗುದ್ದಲಿ ಪೂಜೆ

ಹೊಸದಿಗಂತ ವರದಿ, ಹಾವೇರಿ :

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾವೇರಿಯಲ್ಲಿ ಕೈಗೊಳ್ಳಲಿರುವ ಬೃಹತ್ ಬಹಿರಂಗ ಸಭೆಗೆ ಬೇಕಾದ ಪೆಂಡಾಲ ಹಾಕುವ ಕಾರ್ಯಕ್ಕೆ ಹಾವೇರಿ ನಗರದ ಹೊರ ವಲಯದಲ್ಲಿರುವ ಅಜ್ಜಯನ ಗುಡಿ ಎದುರಿಗೆ ಜಾಗೆಯಲ್ಲಿ ಪೂಜೆ ನೆರವೇರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಮೇ.೭ರ ಭಾನುವಾರ ಆಗಮಿಸುತ್ತಿದ್ದು ಈ ಹಿನ್ನಲೆಯಲ್ಲಿ ವೇದಿಕೆ ಹಾಗೂ ಪೆಂಡಾಲ ಹಾಕುವ ಕಾರ್ಯಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಹಾಗೂ ಧಾರವಾಡ ವಿಭಾಗ ಪ್ರಭಾರಿ ಲಿಂಗಾರಾಜ ಪಾಟೀಲ ಹಾಗೂ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಿಂಗರಾಜ ಪಾಟೀಲ, ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯ ಹಾವೇರಿ, ಶಿಗ್ಗಾವ್, ಹಾನಗಲ್, ಬ್ಯಾಡಗಿ, ಹಿರೇಕೆರೂರ, ರಾಣೇಬೆನ್ನೂರ ಕ್ಷೇತ್ರಗಳೂ ಸೇರಿದಂತೆ ಹಾವೇರಿ ಜಿಲ್ಲೆಗೆ ಹೊಂದಿಕೊಂಡಿರುವ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿಕೊಂಡು ಸಮಾವೇಶವನ್ನು ಮಾಡುವ ವಿಚಾರವನ್ನು ಹೊಂದಲಾಗಿದೆ.

ಸಮಾವೇಶಕ್ಕೆ ಈ ೮ ಕ್ಷೇತ್ರಗಳಿಂದ ಅಂದಾಜು ೪ ಲಕ್ಷ ಬಿಜೆಪಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ನರೇಂದ್ರತ ಮೋದಿಯವರ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಭೋಜರಾಜ ಕರೂಧಿ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಗಿರೀಶ ತುಪ್ಪದ, ಜಗದೀಶ ಬಸೇಗಣ್ಣಿ, ನಾಗೇಂದ್ರ ಕಡಕೋಳ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ಎಸ್.ಆರ್. ಹೆಗಡೆ, ಡಾ. ಸಂತೋಷ ಆಲದಕಟ್ಟಿ, ಕಿರಣಕುಮಾರ ಕೋಣನವರ, ಚನ್ನಮ್ಮ ಬ್ಯಾಡಗಿ, ಶಿವಯೋಗಿ ಹುಲಿಕಂತಿಮಠ, ನಂಜುಂಡೇಶ ಕಳ್ಳೇರ, ವರುಣ ಆನವಟ್ಟಿ, ಗಿರೀಶ ಶೆಟ್ಟರ, ಪ್ರಕಾಶ ಉಜನಿಕೊಪ್ಪ, ವೆಂಕಟೇಶ ದೈವಜ್ಞ, ನರಗುಂದ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!