ಬಿಲ್ ಗೇಟ್ಸ್ ಜೊತೆ ಪ್ರಧಾನಿ ಮೋದಿ ಸಂವಾದ: ಹೇಗಿತ್ತು ಆ ಮಾತುಕತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಜತೆ ದೆಹಲಿಯ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ.

ಈ ವೇಳೆ, ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಮೋದಿ ವ್ಯಕ್ತಪಡಿಸಿದರು.

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಈ ಮೂರು ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಈ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದಾರೆ. ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ಕೇಳುತ್ತಿದ್ದೇನೆ. ಆದ್ರೆ ಭಾರತದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳ ಅಭಿವೃದ್ಧಿ: ಗರ್ಭಕಂಠದ ಕ್ಯಾನ್ಸರ್‌ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಸಂಶೋಧನೆಗಾಗಿ ವಿಜ್ಞಾನಿಗಳಿಗೆ ಹಣವನ್ನು ವಿನಿಯೋಗಿಸಲು ಮುಂದೆ ಬರಲಿರುವ ತಮ್ಮ ಹೊಸ ಸರ್ಕಾರವು ವಿಶೇಷವಾಗಿ ಎಲ್ಲಾ ವರ್ಗದ ಹುಡುಗಿಯರಿಗೆ ಲಸಿಕೆಯನ್ನು ನೀಡಲು ಶ್ರಮವಹಿಸುತ್ತದೆ ಎಂದಿದ್ದಾರೆ.

ಆದ್ರೆ ರೀತಿ ಸಾರ್ವತ್ರಿಕ ಚುನಾವಣೆಯ ನಂತರ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

ಸಂವಾದದಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದ ಮೋದಿ, ಎಐ ಜಾಗತಿಕವಾಗಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಬಿಲ್ ಗೇಟ್ಸ್‌ಗೆ ವಿವರಿಸಿದರು. ಜತೆಗೆ ಎಐ ವ್ಯವಸ್ಥೆಗಳಿಗೆ ಸಮಗ್ರ ತರಬೇತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಅಲ್ಲದೆ, ಎಐಯಿಂದ ರಚಿತವಾದುದಕ್ಕೆ ವಾಟರ್‌ಮಾರ್ಕ್ ಸೇರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು.

ಡೀಪ್‌ಫೇಕ್ ತಂತ್ರಜ್ಞಾನ ವಂಚನೆಗೆ ಹೆಚ್ಚು ಬಳಕೆಯಾಗುವ ಸಾಧ್ಯತೆ ಬಗ್ಗೆ ಮೋದಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಗಮನಹರಿಸುವ ಮತ್ತು ಅದರ ಸಂಪೂರ್ಣ ಮೂಲವನ್ನು ಪತ್ತೆಹಚ್ಚಲು ಬೇಕಾದ ವ್ಯವಸ್ಥೆ ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನವನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ರೂಪಿಸುವ ಬಗ್ಗೆಯೂ ಪ್ರತಿಪಾದಿಸಿದರು.

ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಮುಕ್ತರಾಗಿದ್ದಾರೆ. ನಾನು ‘ನಮೋ ಡ್ರೋನ್ ದೀದಿ’ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಇದು ಇದು ಅತ್ಯಂತ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಜತೆ ಸಂವಹನ ನಡೆಸಿದ್ದೇನೆ, ಅವರು ಸಂತೋಷಪಡುತ್ತಾರೆ. ಈ ಹಿಂದೆ ಸೈಕಲ್ ತುಳಿಯುವುದೇ ಕಷ್ಟ ಎನ್ನುತ್ತಿದ್ದ ಮಹಿಳೆಯರು ಈಗ ಪೈಲಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಬಲ್ಲರು. ಭಾರತದಲ್ಲಿ ಮನಃಸ್ಥಿತಿ ಬದಲಾಗಿದೆ ಎಂದು ಮೋದಿ ಹೇಳಿದರು.

ಜಿ20 ಶೃಂಗಸಭೆ ಕುರಿತು ಮಾತುಕತೆ ನಡೆಯಿತು. ಈ ವೇಳೆ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಜಿ20 ಶೃಂಗಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಯಿತು. ಹವಾಮಾನ ವೈಪರೀತ್ಯ, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಜಿ20 ದೇಶಗಳ ನಡುವೆ ಸಂಬಂಧ ಸುಧಾರಣೆಗೆ ನಿರ್ಣಯಕೈಗೊಳ್ಳಲಾಯಿತು. ಆರ್ಥಿಕ ಸುಧಾರಣೆ, ರಕ್ಷಣೆ, ಶಿಕ್ಷಣ, ವ್ಯಾಪಾರ, ವಿಜ್ಞಾನ-ತಂತ್ರಜ್ಞಾನ, ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಸೇರಿ ಹಲವು ಕ್ಷೇತ್ರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯೊತು. ಶೃಂಗಸಭೆಯಲ್ಲಿನ ನಿರ್ಣಯಗಳ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ಸ್ಲಾಟ್‌ಗಳು ಮತ್ತು ಪ್ರಮಾಣಪತ್ರಗಳನ್ನು ಒದಗಿಸಲು ಭಾರತವು ಕೋವಿನ್ ಪ್ಲಾಟ್‌ಫಾರ್ಮ್ ನ್ನು ಹೇಗೆ ಬಳಸಿತು ಎಂಬುದನ್ನು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!