ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: 79,000 ಕ್ಕೂ ಹೆಚ್ಚು ದೂರು ಸ್ವೀಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿಯವರೆಗೂ ಸಿ-ವಿಜಿಲ್ ಆಯಪ್ ಮೂಲಕ 79,000 ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ದೂರು ಸ್ವೀಕರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಅದ್ರಲ್ಲಿ ಶೇ.90 ಕ್ಕಿಂತ ಹೆಚ್ಚಿನ ದೂರುಗಳನ್ನು ಪರಿಹರಿಸಲಾಗಿದೆ.ಶೇ. 89 ರಷ್ಟು ದೂರುಗಳನ್ನು 100 ನಿಮಿಷಗಳಲ್ಲಿ ಬಗೆಹರಿಸಲಾಗಿದೆ.

ಅಕ್ರಮ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ವಿರುದ್ಧ 58,500 ಕ್ಕೂ ಹೆಚ್ಚು ದೂರುಗಳುಸ್ವೀಕರಿಸಲ್ಪಟ್ಟಿವೆ, ಹಣ, ಉಡುಗೊರೆಗಳು ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1,400 ಕ್ಕೂ ಹೆಚ್ಚು ದೂರುಗಳು ಬಂದಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಶೇ. 3 ರಷ್ಟು ಅಂದರೆ 2,454 ದೂರುಗಳು ಆಸ್ತಿ ಹಾನಿಗೆ ಸಂಬಂಧಿಸಿದೆ. ಬಂದೂಕು ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ 535 ದೂರುಗಳು ಬಂದಿದ್ದು, 529 ದೂರುಗಳನ್ನು ಪರಿಹರಿಸಲಾಗಿದೆ. ಅನುಮತಿ ಅವಧಿ ಮೀರಿ ಸ್ಪೀಕರ್ ಬಳಕೆಗೆ ಸಂಬಂಧಿಸಿದ ದೂರುಗಳು ಸೇರಿದಂತೆ ಅವಧಿ ಮೀರಿದ ಪ್ರಚಾರಕ್ಕಾಗಿ ಒಟ್ಟು 1,000 ದೂರುಗಳು ಬಂದಿರುವುದಾಗಿ ಚುನಾವಣಾ ಸಮಿತಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!