Tuesday, October 3, 2023

Latest Posts

ಉತ್ತರಾಖಂಡದಲ್ಲಿ ಯೋಗಿ ಆದಿತ್ಯನಾಥ್‌ ಸಹೋದರಿಯ ಭೇಟಿಯಾದ ಪ್ರಧಾನಿ ಮೋದಿ ತಂಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಾಸಂತಿ ಬೆನ್‌ ಉತ್ತರಾಖಂಡದ ನೀಲಕಂಠ ಧಾಮದ ಯಾತ್ರೆ ಮಾಡಿದ್ದರು. ಈ ವೇಳೆ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸಹೋದರಿ ಶಶಿ ದೇವಿ ಅವರನ್ನು ಭೇಟಿಯಾಗಿದ್ದಾರೆ.

ಕೊಠಾರಿಯ ದೇವಸ್ಥಾನದ ಬಳಿ ಇಬ್ಬರೂ ಆತ್ಮೀಯ ಶುಭಾಶಯಗಳನ್ನು ಕೋರಿಕೊಂಡಿದ್ದರೆ, ಪ್ರೀತಿಯಿಂದ ಅಪ್ಪುಗೆ ಮಾಡಿರುವುದನ್ನುವೀಡಿಯೊ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಾಸಂತಿ ಬೆನ್ ಅವರು ತಮ್ಮ ಪತಿ ಹಂಸ್ಮುಖ್ ಮತ್ತು ಕೆಲವು ಸಂಬಂಧಿಕರೊಂದಿಗೆ ಋಷಿಕೇಶಕ್ಕೆ ಖಾಸಗಿ ಭೇಟಿ ನೀಡಿದ್ದರು, ಅಲ್ಲಿ ಅವರು ದಯಾನಂದ ಆಶ್ರಮದಲ್ಲಿ ತಂಗಿದ್ದರು.

ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಅವರು ಶಶಿದೇವಿ ಅವರ ಅಂಗಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುವ ಅವಕಾಶವನ್ನು ಪಡೆದರು. ಶಶಿದೇವಿಯವರ ಪತಿ ‘ಜೈ ಶ್ರೀ ಗುರು ಗೋರಕ್ಷನಾಥ್ ಜೀ’ ಹೆಸರಿನ ಸಣ್ಣ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.

ದೇಶದ ಇಬ್ಬರು ಪ್ರಮುಖ ನಾಯಕರ ಸಹೋದರಿಯರ ನಡುವಿನ ಭೇಟಿಯು ಸರಳತೆ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಾರವನ್ನು ಉದಾಹರಿಸುತ್ತದೆ ಎಂದು ಬಿಜೆಪಿ ನಾಯಕ ಅಜಯ್ ನಂದಾ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇವರಿಬ್ಬರ ಬಾಂಧವ್ಯವನ್ನು ನೋಡಿದ ಬಳಿಕ ಹೃದಯ ತುಂಬಿ ಹೋಗಿದೆ. ಇದು ರಾಜಕೀಯ ಬಂಧವನ್ನೂ ಮೀರಿದ್ದು ಮತ್ತು ಭಾರತದ ಮೌಲ್ಯಗಳನ್ನು ಪ್ರತಿನಿಧಿಸುವ ಈ ಇಬ್ಬರು ಗಮನಾರ್ಹ ವ್ಯಕ್ತಿಗಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!