ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಭೋಜನಕೂಟದಲ್ಲಿ ಭೇಟಿಯಾಗಿದ್ದಾರೆ.
ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥರು ರಾಹುಲ್ ಗಾಂಧಿಗೆ ಪುಷ್ಪಗುಚ್ಛವನ್ನು ನೀಡಿ ಸ್ವಾಗತಿಸಿದ್ದು, ನಂತರ ಮಟನ್ ಊಟ ಸವಿದಿದ್ದಾರೆ. ಲಾಲು ಯಾದವ್ ಅವರೇ ಮಟನ್ ಊಟ ಸಿದ್ಧಪಡಿಸಿದ್ದರು ಎಂಬುದು ವಿಶೇಷ.
ವಿಪಕ್ಷಗಳ ಒಕ್ಕೂಟ I.N.D.I.A ರೂಪುಗೊಂಡ ನಂತರ ಆರ್‌ಜೆಡಿ ಸಂಸದೆ ಮಿಸಾ ಭಾರ್ತಿ ಅವರ ದೆಹಲಿ ನಿವಾಸದಲ್ಲಿ ಇವರಿಬ್ಬರ ಭೇಟಿ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡಾ ಪಾಲ್ಗೊಂಡಿದ್ದಾರೆ.
आज @RahulGandhi जी ने RJD अध्यक्ष @laluprasadrjd जी से उनके दिल्ली स्थित निवास पर मुलाकात की। pic.twitter.com/NMXa4jP8hi
— Congress (@INCIndia) August 4, 2023
ಲಾಲು ಯಾದವ್ ಅವರು ಬಿಹಾರದಿಂದ ದೇಸಿ ಮಟನ್ ಮತ್ತು ಮಸಾಲೆಗಳನ್ನು ತರಲು ವ್ಯವಸ್ಥೆ ಮಾಡಿದ್ದರು. ಬಿಹಾರದ ವಿಶೇಷ ಶೈಲಿಯಲ್ಲಿ ಮಟನ್ ಅನ್ನು ಹೇಗೆ ಬೇಯಿಸುತ್ತಾರೆ ಎಂಬುದನ್ನು ಅವರು ಕಾಂಗ್ರೆಸ್ ನಾಯಕರಿಗೆ ತೋರಿಸಿದರು ಎಂದು ಮೂಲಗಳು ತಿಳಿಸಿವೆ.