ಕೊರೋನಾ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಯಶಸ್ಸು: ಜೋ ಬೈಡೆನ್ ಶ್ಲಾಘನೆ

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಕೊರೋನಾ ನಿರ್ವಹಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೊಗಳಿದ್ದಾರೆ.ಪ್ರಜಾಸತ್ತಾತ್ಮಕ ವಿಧಾನದಲ್ಲಿ ಕೋವಿಡ್​ ಮಹಾಮಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಬೈಡನ್​ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ವುದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶ್ಲಾಘಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಎರಡು ದಿನಗಳ ಕ್ವಾಡ್ ಶೃಂಗ ಸಭೆಯ ಮುಕ್ತಾಯಗೊಂಡಿದ್ದು, ಈ ಸಂದರ್ಭದಲ್ಲಿ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಕ್ರಮವನ್ನು ಹೊಗಳಿದ್ದಾರೆ.
ಸುದೀರ್ಘವಾದ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೂಲಕ ಹೋಗದೆಯೂ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂದು ಮೋದಿ ನಾಯಕತ್ವದಿಂದ ಗೊತ್ತಾಗಿದೆ ಎಂದು ಜೋ ಬೈಡನ್​ ಹೇಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಚೀನಾ ಮತ್ತು ರಷ್ಯಾದಂತಹ ನಿರಂಕುಶಾಧಿಕಾರಿಗಳು ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಲ್ಲೆವು ಎಂಬ ಸುಳ್ಳು ಕೂಡಾ ಬಯಲಾಗಿದೆ ಎಂದು ಜೋ ಬೈಡೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಸಂಖ್ಯೆಯಲ್ಲಿ ಚೀನಾ ಮತ್ತು ಭಾರತ ಒಂದೇ ಗಾತ್ರವನ್ನು ಹೊಂದಿದ್ದರೂ, ಕೋವಿಡ್​ ನಿಭಾಯಿಸುವಲ್ಲಿ ಭಾರತದ ಯಶಸ್ಸನ್ನು ಚೀನಾದ ವೈಫಲ್ಯದೊಂದಿಗೆ ಹೋಲಿಸಿ ಈ ಹೇಳಿಕೆ ನೀಡಿದರು ಎಂದು ವರದಿಯಾಗಿದೆ.
ಕೋವಿಡ್ ಸಂದರ್ಭದಲ್ಲಿ ಲಸಿಕೆಯನ್ನು ಸಿದ್ದಪಡಿಸಿ ಇತರ ದೇಶಗಳಿಗೆ ಸರಬರಾಜು ಮಾಡಿರುವುದು ಕೂಡಾ ಭಾರತದ ಹೆಗ್ಗಳಿಕೆಯಾಗಿದೆ. ಇದು ಭಾರತದ ಯಶಸ್ಸಿಗೆ ಕಾರಣ ಎಂದು ಆಸ್ಟ್ರೇಲಿಯಾದ ನಿಯೋಜಿತ ನೂತನ ಪ್ರಧಾನಿ ಆಯಂಟೊನಿ ಅಲ್ಬನೀಸ್ ಕೂಡಾ ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!