ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರು ಇಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು , ಉನಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ.

ಇದರ ನಂತರ ಬಲ್ಕ್ ಡ್ರಗ್ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತದನಂತರ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ಸೆಮಿ ಹೈಸ್ಪೀಡ್ ರೈಲು ದೆಹಲಿ ಮತ್ತು ಅಂಬ್ ಅಂಡೌರಾ ನಡುವೆ ಸಂಚರಿಸಲಿದೆ. ಬುಧವಾರ ಹೊರತುಪಡಿಸಿ ಇನ್ನೆಲ್ಲಾ ವಾರ ರೈಲು ಸಂಚರಿಸಲಿದೆ.

ಹೊಸತಾಗಿ ಆರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅವಘಡಗಳ ಕಾರಣ ಸುದ್ದಿಯಲ್ಲಿತ್ತು. ನವದೆಹಲಿ-ವಾರಣಾಸಿ ಮಾರ್ಗದ ರೈಲಿನ ಚಕ್ರಗಳು ಜಾಮ್ ಆಗಿದ್ದ ಕಾರಣ ಪ್ರಯಾಣಿಕರಿಗೆ ಪರ್ಯಾಯವಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!