Sunday, March 26, 2023

Latest Posts

ಮನ್‌ ಕಿ ಬಾತ್‌ : ಲಾಲಿಹಾಡು ವಿಭಾಗದಲ್ಲಿ ಕರ್ನಾಟಕದ ವ್ಯಕ್ತಿಗೆ ಪ್ರಶಸ್ತಿ ಘೋಷಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇಂದು ಪ್ರಸಾರಗೊಂಡ ಪ್ರಧಾನಿ ಮೋದಿಯವರ 98ನೇ ಆವೃತ್ತಿಯ ಮನ್‌ ಕಿ ಬಾತ್ ಕಾರ್ಯಕ್ರಮದಲ್ಲಿ ಲಾಲಿ ಹಾಡು ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ವಿಎಂ ಮಂಜುನಾಥ್ ಮೊದಲ ಸ್ಥಾನ ಪಡೆದಿರುವುದಾಗಿ ಘೋಷಿಸಿದ್ದಾರೆ.

ಮಲಗು ಕಂದ ಹಾಡಿನ ಕೆಲ ಸಾಲುಗಳನ್ನು ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಕೇಳಿಸಿಕೊಂಡಿದ್ದರು. ಗೀತೆ ಹಾಗೂ ಲಾಲಿ ಹಾಡಿನಂತೆಯೇ ರಂಗೋಲಿ ಸ್ಪರ್ಧೆಯು ಕೂಡ ನಡೆದಿತ್ತು. ನೇತಾಜಿ ಸುಭಾಷ್​ಚಂದ್ರ ಭೋಸ್ ಪಂಜಾಬ್​ನ ಕಮಲ್​ ಸಿಂಗ್​ಗೆ ಮೊದಲ ಸ್ಥಾನ ಲಭಿಸಿದೆ.

ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ವಿಜಯದುರ್ಗಾ ಪ್ರಥಮ ಸ್ಥಾನ ಪಡೆದಿದ್ದಾರೆ. ಉಸ್ತಾದ್ ಬಿಸ್ಮಿಲ್ಲಾಖಾನ್ ಪುರಸ್ಕಾರವನ್ನು ಪ್ರತಿಭಾಶಾಲಿ ಕಲಾವಿದರಿಗೆ ನೀಡಲಾಯಿತು.

ಈ ವೇಳೆ ಆಟಿಕೆಗಳು ಮತ್ತು ಕಥೆ ಹೇಳುವ ರೂಪಗಳ ಕುರಿತು ಮಾತನಾಡಿದರು. ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ದೇಶದಲ್ಲಿ ಡಿಜಿಟಲ್ ಇಂಡಿಯಾದ ಶಕ್ತಿಯು ಮೂಲೆ ಮೂಲೆಯನ್ನು ತಲುಪುತ್ತಿದೆ ಎಂದು ಪ್ರಧಾನಿ ಹೇಳಿದರು. ಇ-ಸಂಜೀವನಿ ಎಂಬ ಆಪ್ ಇದೆ. ಈ ಅಪ್ಲಿಕೇಶನ್‌ನಿಂದ, ನೀವು ವೀಡಿಯೊ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಸಲಹೆಯನ್ನು ಪಡೆಯಬಹುದು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!