Thursday, March 30, 2023

Latest Posts

ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ: ಮತ್ತೊಬ್ಬರು ಅಸ್ವಸ್ಥ

ಹೊಸದಿಗಂತ ವರದಿ ಮಡಿಕೇರಿ :

ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜುನಾಥ ಮಾಸ್ಟರ್ ಮತ್ತು ಭಾಗೀರಥಿ ದಂಪತಿಯ ಪುತ್ರ ಅಶ್ವಿನ್ ಕುಮಾರ್ (48) ಸಾವನ್ನಪ್ಪಿರುವವರು.

ಶನಿವಾರ ಬೆಳಗ್ಗೆ ಅಶ್ವಿನಿ ಕುಮಾರ್ ಅವರು ಸಹೋದರಿ ಅಪರ್ಣಾ ಅವರೊಂದಿಗೆ ಗದ್ದೆಗೆ ತೆರಳಿದ್ದ ಸಂದರ್ಭ ಅವರ ಮೇಲೆ ಹೆಜ್ಜೇನು ದಾಳಿ ಮಾಡಿತ್ತು. ಈ ಸಂದರ್ಭ ಇವರಿಬ್ಬರು ಮನೆಯತ್ತ ಓಡಿ ಬಾಗಿಲು ಹಾಕಿಕೊಂಡಿದ್ದರು.

ಆದರೆ ಅಷ್ಟರಲ್ಲೇ ಸಾಕಷ್ಟು ಹೆಜ್ಜೇನುಗಳ ಕಡಿತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದ ಅಶ್ವಿನ್ ಕುಮಾರ್ ಮತ್ತು ಅಪರ್ಣಾ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅಶ್ವಿನ್ ಕುಮಾರ್ ಕೊನೆಯುಸಿರೆಳೆದಿದ್ದರು. ಇವರ ಸಹೋದರಿ ಅಪರ್ಣಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!