Friday, March 24, 2023

Latest Posts

ಶ್ರದ್ದಾ ಪ್ರಧಾನಿ ಭೇಟಿ : ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸ್ಟ್ಯಾಂಡಪ್ ಕಾಮಿಡಿಯನ್ ಖ್ಯಾತಿಯ ಶ್ರದ್ಧಾ ʼಅಯ್ಯೋ ಶ್ರದ್ಧಾʼ (Aiyyo Shraddha) ಎಂದೇ ಪೇಮಸ್‌ ಆಗಿದ್ದಾರೆ. ಶ್ರದ್ದಾ ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ (ಫೆಬ್ರವರಿ 12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಅವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಅವರಿಗೂ ಕೂಡ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಪೋಸ್ಟ್‌ ಹಾಕಿದ್ದಾರೆ.

ಶ್ರದ್ದಾ ಅವರ ಪೋಸ್ಟ್‌ ನಲ್ಲಿ ಮೊದಲ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಆಡಿದ ಮೊದಲ ಮಾತು ‘ಅಯ್ಯೋ’ ಎಂದು! ಈ ವಿಚಾರವನ್ನು ಕೂಡ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಜತೆಗೆ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಚಿತ್ರಗಳನ್ನು ಹಂಚಿಕೊಂಡ ಅವರು, “ನಮಶ್ಕರ್, ಹೌದು, ನಾನು ನಮ್ಮ ದೇಶದ ಗೌರವಾನ್ವಿತ ಪ್ರಧಾನಿಯನ್ನು ಭೇಟಿ ಮಾಡಿದ್ದೇನೆ. ಅವರು ನನಗೆ ಹೇಳಿದ ಮೊದಲ ಮಾತು ‘ಅಯ್ಯೋ!’. ನಾನು ಕಣ್ಣು ಮಿಟುಕಿಸಲೇ ಇಲ್ಲ, ಅದು ನನ್ನ ‘ಓ ಮೈ ಜೋಡ್, ಅವರು ನಿಜವಾಗಿಯೂ ಹೇಳಿದ್ದು, ಇದು ನಿಜವಾಗಿಯೂ ನಡೆಯುತ್ತಿದೆ!!!!’ ನೋಡಿ. ಧನ್ಯವಾದಗಳು @ಭಾರತದ ಪ್ರಧಾನ ಮಂತ್ರಿ!” ಎಂದು ಬರೆದಿದ್ದಾರೆ.

ಪ್ರಸಿದ್ಧ ಹಾಸ್ಯನಟಿ, ಭಾರತೀಯ ನಟಿ, ರೇಡಿಯೋ ಜಾಕಿ ಮತ್ತು ದೂರದರ್ಶನ ನಿರೂಪಕಿ, ಅಯ್ಯೋ ಶ್ರದ್ಧಾ ಪ್ರಾಥಮಿಕವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಅವರು ತುಳು, ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂತೆ ಐದು ಭಾಷೆಗಳಲ್ಲಿ ವೀಡಿಯೊಗಳನ್ನು ಪ್ರಕಟಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!