ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಸರ್ಕಾರ ವಿರುದ್ಧ ವಿರೋಧ ಪಕ್ಷಗಳು ನೀಡಿರುವ ಅವಿಶ್ವಾಸ ನಿರ್ಣಯವು ಇಂಡಿಯಾ (INDIA) ಮೈತ್ರಿಕೂಟದಲ್ಲಿ ಪಕ್ಷಗಳ ನಡುವೆ ಇರುವ ಪರಸ್ಪರ ಅಪನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ತಮ್ಮ ಪ್ರಸ್ತಾಪದೊಂದಿಗೆ ಯಾರೂ ಇಲ್ಲ ಎಂಬುದನ್ನು ಪರೀಕ್ಷಿಸಲು ಈ ಮೈತ್ರಿಕೂಟ ಮುಂದಾಗಿದೆ. ಅವರ ಮಧ್ಯೆಯೇ ಪರಸ್ಪರ ನಂಬಿಕೆಯಿಲ್ಲ ಎಂಬುದು ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷದ ಮೈತ್ರಿಯನ್ನು ‘ಘಮಂಡಿಯಾ’ (ಅಹಂಕಾರ) ಎಂದು ಕರೆದಿದ್ದಾರೆ. ಈ ವೇಳೆ ದೆಹಲಿ ಸೇವಾ ಮಸೂದೆಯ ಮೇಲೆ ನಡೆದ ಮತದಾನದಲ್ಲಿ ಸೆಮಿಫೈನಲ್ ನಲ್ಲಿ ಗೆಲುವು ಕಂಡಿದೆ ಎಂದು ಬಣ್ಣಿಸಿ ಪಕ್ಷದ ರಾಜ್ಯಸಭಾ ಸದಸ್ಯರನ್ನು ಅಭಿನಂದಿಸಿದರು.
ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮೋದಿ, 2024ರ ಲೋಕಸಭೆ ಚುನಾವಣೆಗೆ ಮೊದಲು ರಾಜ್ಯಸಭೆಯಲ್ಲಿ ಮತದಾನವನ್ನು ಸೆಮಿಫೈನಲ್ ಎಂದು ಬಣ್ಣಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಶಾಹಿಯ ಮೇಲೆ ಕೇಂದ್ರದ ನಿಯಂತ್ರಣವನ್ನು ನೀಡುವ ವಿವಾದಾತ್ಮಕ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದ ನಂತರ ದೆಹಲಿ ಸೇವಾ ಮಸೂದೆ ಸೋಮವಾರ ಸಂಸತ್ತಿನ ಅನುಮೋದನೆ ಪಡೆದುಕೊಂಡಿತು. ಲೋಕಸಭೆಯಲ್ಲಿ ಆಡಳಿತ ಪಕ್ಷ ಬಹುಮತ ಹೊಂದಿರುವುದರಿಂದ ಅವಿಶ್ವಾಸ ನಿರ್ಣಯವನ್ನು ಸೋಲಿಸುವುದು ಖಚಿತ ಎಂದು ಹೇಳಲಾಗುತ್ತಿದೆ.
Attended the @BJP4India Parliamentary Party meeting earlier today. pic.twitter.com/woSH3tIKxE
— Narendra Modi (@narendramodi) August 8, 2023