ನಾಳೆ ತೆಲಂಗಾಣಕ್ಕೆ ಬರಲಿರುವ ಪ್ರಧಾನಿ ಮೋದಿ: ಪ್ರವಾಸದ ವೇಳಾಪಟ್ಟಿ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ಮೋದಿ ನಾಳೆ (ಜುಲೈ 8)ರಂದು ತೆಲಂಗಾಣಕ್ಕೆ ಭೇಟಿ ನೀಡಿಲಿದ್ದಾರೆ. ಪ್ರಧಾನಿಯವರ ವರಂಗಲ್ ಭೇಟಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮೋದಿ ಶನಿವಾರ ಬೆಳಗ್ಗೆ ಹಕೀಂಪೇಟ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಹಕೀಂಪೇಟೆಯಿಂದ ಹೆಲಿಕಾಪ್ಟರ್ ಮೂಲಕ ವಾರಂಗಲ್‌ಗೆ ತೆರಳಿ ಅಲ್ಲಿ ಕಲಾ ಕಾಲೇಜು ಮೈದಾನದಲ್ಲಿ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.

ಮೋದಿ ಪ್ರವಾಸ ವೇಳಾಪಟ್ಟಿ ಹೀಗಿದೆ

* ಬೆಳಗ್ಗೆ 9:45ಕ್ಕೆ ಮೋದಿ ವಿಶೇಷ ವಿಮಾನದಲ್ಲಿ ಹಕೀಂಪೇಟ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.
* ಬೆಳಗ್ಗೆ 9:50ಕ್ಕೆ ಹೆಲಿಕಾಪ್ಟರ್ ಮೂಲಕ ವರಂಗಲ್‌ಗೆ
* ಬೆಳಗ್ಗೆ 10:35ಕ್ಕೆ ವರಂಗಲ್ ತಲುಪಲಿದ್ದಾರೆ
* ಬೆಳಗ್ಗೆ 10:45ಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ
* ಬೆಳಗ್ಗೆ 11:30ಕ್ಕೆ ಬಿಜೆಪಿ ಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ
* 40 ನಿಮಿಷಗಳ ಕಾಲ ಸಭೆಯಲ್ಲಿ ಭಾಗವಹಿಸುವರು
* ವರಂಗಲ್‌ನಿಂದ ಹೈದರಾಬಾದ್‌ಗೆ ಮಧ್ಯಾಹ್ನ 12:25 ಕ್ಕೆ ನಿರ್ಗಮನ
* 1:10 ಕ್ಕೆ ಹಕೀಂಪೇಟ್ ವಿಮಾನ ನಿಲ್ದಾಣಕ್ಕೆ ವಾಪಸ್
* ಹಕೀಂಪೇಟ್‌ನಿಂದ ಪ್ರಧಾನಿ ಮೋದಿ ರಾಜಸ್ಥಾನಕ್ಕೆ ಪ್ರಯಾಣ

ವರಂಗಲ್ ಭೇಟಿಯ ಅಂಗವಾಗಿ ಪ್ರಧಾನಿಯವರು ಕಾಜಿಪೇಟೆಯಲ್ಲಿ 500 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರೂ. 5,550 ಕೋಟಿ ಮೌಲ್ಯದ 176 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ. ಈ ಯೋಜನೆಗಳನ್ನು ನಾಗ್ಪುರ-ವಿಜಯವಾಡ ಕಾರಿಡಾರ್‌ನ 108 ಕಿಮೀ ಮಂಚಿರ್ಯಾಲ-ವರಂಗಲ್ ವಿಭಾಗದಲ್ಲಿ ಸೇರಿಸಲಾಗಿದೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ವರಂಗಲ್‌ಗೆ ತೆರಳಲಿ ಬರಮಾಡಿಕೊಳ್ಳಲಿದ್ದಾರೆ. ನಾಳೆ ಬೆಳಗ್ಗೆ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಬಳಿಕ ಮೋದಿ ಸಭೆ ಆಯೋಜಿಸಿರುವ ಹನುಮಕೊಂಡ ಕಲಾ ಕಾಲೇಜು ಮೈದಾನಕ್ಕೆ ಕಿಶನ್ ರೆಡ್ಡಿ ತೆರಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!