Thursday, June 1, 2023

Latest Posts

ಇಂದಿನಿಂದ ಎರಡು ದಿನ ಕೇರಳ ಪ್ರವಾಸದಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡು ದಿನಗಳ ಕೇರಳ ಪ್ರವಾಸಕ್ಕಾಗಿ ಇಂದು ಕೊಚ್ಚಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಸಂಜೆ ರೋಡ್‌ ಶೋ ನಡೆಸಿ ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇಂದು ನಡೆಯಲಿರುವ ʼಯುವಂ 2023ʼ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಇಲ್ಲಿಯ ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ. ಕ್ರಿಶ್ಚಿಯನ್‌ ಸಮುದಾಯದ ಹಿರಿಯ ಪಾದ್ರಿಗಳೊಂದಿಗೆ ಮತ್ತು ಯುವ ಜನರೊಂದಿಗೆ ಸಭೆ ನಡೆಸಲಿದ್ದಾರೆ.

ಮಂಗಳವಾರದಂದು ದೇಶದ ಮೊದಲ ಡಿಜಿಟಲ್‌ ವಿಜ್ಞಾನ ಉದ್ಯಾನವನಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ರೂ. 1500 ಕೋಟಿಯ ಯೋಜನೆಯಿದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!