ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಪ್ರಧಾನಿ ನರೇಂದ್ರ ಮೋದಿ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಆರು ದಿನಗಳ ಪ್ರವಾಸಲ್ಲಿರಲಿದ್ದಾರೆ. ಮೇ 19-21ರವರೆಗೆ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಲಿದ್ದಾರೆ.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದರು. ಈ ವರ್ಷ ಭಾರತವು G7 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ G7 ಶೃಂಗಸಭೆಯಲ್ಲಿ ಅವರ ಉಪಸ್ಥಿತಿಯು ವಿಶೇಷವಾಗಿ ಅರ್ಥಪೂರ್ಣವಾಗಿದೆ ಎಂದು ಪಿಎಂಒ ತಿಳಿಸಿದೆ.

“ಜಪಾನಿನ ಪ್ರಧಾನಮಂತ್ರಿ ಹೆಚ್.ಇ. ಶ್ರೀ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ನಾನು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‌ನ ಹಿರೋಷಿಮಾಕ್ಕೆ ತೆರಳುತ್ತೇನೆ. ಭಾರತಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಕಿಶಿಡಾ ಅವರನ್ನು ಮತ್ತೊಮ್ಮೆ ಭೇಟಿಯಾಗಲು ಸಂತೋಷವಾಗುತ್ತದೆ. ಭಾರತ-ಜಪಾನ್ ಶೃಂಗಸಭೆ, ಈ ವರ್ಷ ಭಾರತವು G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಈ G7 ಶೃಂಗಸಭೆಯಲ್ಲಿ ನನ್ನ ಉಪಸ್ಥಿತಿಯು ವಿಶೇಷವಾಗಿ ಅರ್ಥಪೂರ್ಣವಾಗಿದೆ,”ಎಂದು ಪ್ರಧಾನ ಮಂತ್ರಿ ಕಚೇರಿ (PMO) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೋದಿ ಹೇಳಿದರು.

“ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಒಟ್ಟಾಗಿ ಪರಿಹರಿಸುವ ಅಗತ್ಯತೆಗಳ ಕುರಿತು ನಾನು G7 ದೇಶಗಳು ಮತ್ತು ಇತರ ಆಹ್ವಾನಿತ ಪಾಲುದಾರರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇನೆ. ಹಿರೋಷಿಮಾ G7 ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತೇನೆ”ಎಂದರು

ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಧಾನಿ ಮೋದಿ ಅವರು ಜಪಾನ್ ಪ್ರವಾಸವನ್ನು ಮುಗಿಸಿದ ನಂತರ ಪಪುವಾ ನ್ಯೂಗಿನಿಯಾದ ಪೋರ್ಟ್ ಮೊರೆಸ್ಬಿಗೆ ಪ್ರಯಾಣಿಸಲಿದ್ದಾರೆ. “ಇದು ನನ್ನ ಮೊದಲ ಭೇಟಿಯಾಗಿದೆ, ಮತ್ತು ಭಾರತೀಯ ಪ್ರಧಾನಿ ಪಪುವಾ ನ್ಯೂಗಿನಿಯಾಗೆ ಮೊದಲ ಭೇಟಿ” ಇದಾಗಿದೆ.

ಪಪುವಾ ನ್ಯೂಗಿನಿಯಾ ಭೇಟಿಯ ನಂತರ, ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಪ್ರಯಾಣಿಸಲಿದ್ದಾರೆ. ಭೇಟಿಯ ಸಮಯದಲ್ಲಿ ಅವರು ಆಸ್ಟ್ರೇಲಿಯಾದ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!