Sunday, March 26, 2023

Latest Posts

37ನೇ ಮಿಜೋರಾಂ ರಾಜ್ಯ ರಚನಾ ದಿನ : ಪ್ರಧಾನಿ ಮೋದಿ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಿಜೋರಾಂ ಜನತೆಗೆ 37ನೇ ರಾಜ್ಯ ರಚನಾ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ, “ಮಿಜೋರಾಂನ ಜನರಿಗೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯಗಳು. ಮಿಜೋರಾಂ ತನ್ನ ನೈಸರ್ಗಿಕ ಸೌಂದರ್ಯ, ಶ್ರಮಶೀಲ ಜನರು ಮತ್ತು ಅತ್ಯುತ್ತಮ ಮಿಜೋ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಮುಂಬರುವ ದಿನಗಳಲ್ಲಿ ಮಿಜೋರಾಂ ಜನರ ಆಕಾಂಕ್ಷೆಗಳು ಈಡೇರಲಿ ಎಂದು ಆಶಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಿಜೋರಾಂ ಜನತೆಗೆ ಶುಭ ಹಾರೈಸಿದ್ದಾರೆ. “ಮಿಜೋರಾಂನ ಜನರಿಗೆ ಅವರ ರಾಜ್ಯೋತ್ಸವದ ದಿನದಂದು ಅಭಿನಂದನೆಗಳು. ಮಿಜೋರಾಂ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದ ಅಗಾಧವಾಗಿ ಶ್ರೀಮಂತವಾಗಿದೆ. ರಾಜ್ಯದ ಬೆಳವಣಿಗೆ, ಯಶಸ್ಸು ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಯೋಗಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!