Thursday, March 30, 2023

Latest Posts

SHOCKING | ಗಂಗಾ ನದಿಯಲ್ಲಿ ಮುಳುಗಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಬದೌನ್‌ನಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ ಗಂಗಾ ಸ್ನಾನ ಮಾಡಲು ತೆರಳಿದ್ದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜಿನ ಐವರು ವಿದ್ಯಾರ್ಥಿಗಳು ಕಚಲಾ ಗಂಗಾ ಘಾಟ್‌ಗೆ ಸ್ನಾನಕ್ಕೆ ತೆರಳಿದ್ದು, ಮೂವರಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನೀರಿನ ಸೆಳೆತಕ್ಕೆ ಸಿಕ್ಕು ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದಾರೆ, ವಿದ್ಯಾರ್ಥಿಗಳಾದ ಅಂಕುಶ್ ಗೆಹ್ಲೋಟ್ ಹಾಗೂ ಪ್ರಮೋದ್ ಯಾದವ್ ಬದುಕುಳಿದಿದ್ದಾರೆ.

ಡೈವರ್‌ಗಳ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಜೈ ಮೌರ್ಯ, ಪವನ್ ಪ್ರಕಾಶ್ ಹಾಗೂ ನವೀನ್ ಸೆಂಗಾರ್ ಮೃತರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!