ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಹೈ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಿತು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಜನವರಿ 10 ಕ್ಕೆ ಒಂದು ಮುಂದೂಡಿದರು.
ವಿಚಾರಣೆ ಆರಂಭದ ವೇಳೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ವಾದ ಮಂಡಿಸಿದರು. ಪೊಲೀಸರು ಕೆಲವು ಸಾಕ್ಷಿಗಳ ಹೇಳಿಕೆಯನ್ನು ಕೋರ್ಟಿಗೆ ಸಲ್ಲಿಸಿಲ್ಲ. ಈ ಹೇಳಿಕೆಗಳು ಆರೋಪ ಪಟ್ಟಿಯ ಭಾಗವಲ್ಲದಿದ್ದರೂ ಕೂಡ ಕೋರ್ಟ್ ತರಿಸಿಕೊಳ್ಳಬಹುದು. ಪೊಲೀಸರ ಕೇಸ್ ಡೈರಿಯ ಕೂಡ ತನಿಖೆಯ ಭಾಗವಾಗಿದೆ ಎಂದು ವಾದಿಸಿದರು. ಈ ವೇಳೆ ವಿಚಾರಣೆ ಜನವರಿ 10 ಕ್ಕೆ ಮುಂದೂಡಿ ಹೈಕೋರ್ಟ ಆದೇಶಿಸಿತು.